ಶನಿವಾರ, ಜೂನ್ 12, 2021
23 °C

ಕಪ್ಪುಹಣಕ್ಕೆ ಕಡಿವಾಣ: ಸಮಿತಿ ಕಾಲಮಿತಿ ಮತ್ತೊಮ್ಮೆ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಪ್ಪುಹಣದ ಪಿಡುಗಿಗೆ ಕಡಿವಾಣ ಹಾಕಲು ಕೇಂದ್ರ ನೇರ ತೆರಿಗೆ ಮಂಡಲಿ (ಸಿಬಿಡಿಟಿ) ಅಧ್ಯಕ್ಷರ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯ ಅವಧಿಯನ್ನು ಮೂರನೇ ಬಾರಿಗೆ ವಿಸ್ತರಿಸಲಾಗಿದ್ದು, ಸಮಿತಿಯು ಮಾರ್ಚ್ ಅಂತ್ಯದ ವೇಳೆಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ.

ಕಳೆದ ವರ್ಷ ಮೇ ತಿಂಗಳಲ್ಲಿ ರಚಿತವಾದ ಈ ಸಮಿತಿಗೆ ನೀಡಲಾಗಿದ್ದ ಕಾಲಾವಧಿಯನ್ನು ಈ ಮುನ್ನ ಎರಡು ಬಾರಿ ವಿಸ್ತರಿಸಲಾಗಿತ್ತು.

ಸಮಿತಿಯ ಕಾಲಾವಧಿಯನ್ನು ಇದೀಗ ಮಾರ್ಚ್ 31ರ ವರೆಗೆ  ವಿಸ್ತರಣೆ ಮಾಡಿರುವುದರಿಂದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಮಾರ್ಚ್ 16ರಂದು ಬಜೆಟ್ ಭಾಷಣದಲ್ಲಿ, ಸಮಿತಿಯ ಶಿಫಾರಸುಗಳ ಕುರಿತು ಪ್ರಸ್ತಾಪಿಸುವ ಸಾಧ್ಯತೆ ಇಲ್ಲ.

ಸದನದಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು ಅಕ್ರಮ ಹಣ ವಿದೇಶಗಳಿಗೆ  ಹರಿಯುವುದನ್ನು ತಡೆಯುವ ಬಗ್ಗೆ ಪ್ರಸ್ತಾಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.