ಕಪ್ಪುಹಣ: ಅಮೆರಿಕ, ಭಾರತ ಮುಂಚೂಣಿ

ಬುಧವಾರ, ಜೂಲೈ 17, 2019
25 °C

ಕಪ್ಪುಹಣ: ಅಮೆರಿಕ, ಭಾರತ ಮುಂಚೂಣಿ

Published:
Updated:

ನವದೆಹಲಿ(ಪಿಟಿಐ): ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಕಾರ್ಪೊರೇಟ್ ಸೋಗಿನಲ್ಲಿ ಬಚ್ಚಿಟ್ಟಿರುವ ಅಕ್ರಮ ಆಸ್ತಿಗಳು ಪತ್ತೆಯಾದ ಗರಿಷ್ಠ ನಿದರ್ಶನಗಳಿವೆ ಎಂದು ಸ್ವಿಟ್ಜರ್ಲೆಂಡ್ ಹೇಳಿದೆ. ಭಾರತ ಕೂಡ ಈ ವಿಷಯದಲ್ಲಿ ಮುಂದಿದೆ ಎನ್ನುವುದನ್ನೂ ಅದು ಬಹಿರಂಗಪಡಿಸಿದೆ.ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ವಿವಿಧ ದೇಶಗಳೊಂದಿಗೆ ದ್ವಿತೆರಿಗೆ ಒಪ್ಪಂದ ಮಾಡಿಕೊಳ್ಳಲು ಸ್ವಿಟ್ಜರ್ಲೆಂಡ್ ಸರ್ಕಾರದ ಫೆಡರಲ್ ಹಣಕಾಸು ಇಲಾಖೆ (ಎಫ್‌ಡಿಎಫ್) ಒಪ್ಪಿಕೊಂಡಿದೆ. ಸ್ವಿಸ್ ಹಣಕಾಸು ಸಂಸ್ಥೆಗಳು, ಅದರಲ್ಲೂ ಪ್ರಮುಖವಾಗಿ ಬ್ಯಾಂಕುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಂತರರಾಷ್ಟ್ರೀಯ ಒತ್ತಡ ಬಂದ ಕಾರಣ ಸ್ವಿಸ್ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.ಗಡಿಯಾಚೆಗಿನ ಹಣಕಾಸು ಅಪರಾಧ ತಡೆಗೆ ಸ್ವಿಟ್ಜರ್ಲೆಂಡ್ ಮುಂಚೂಣಿಯಲ್ಲಿದೆ ಎಂದು 2012ರ ಅಂತರರಾಷ್ಟ್ರೀಯ ಹಣಕಾಸು ಹಾಗೂ ತೆರಿಗೆ ವಿಷಯಕ್ಕೆ ಸಂಬಂಧಿಸಿದ ವರದಿಯಲ್ಲಿ ಎಫ್‌ಡಿಎಫ್ ತಿಳಿಸಿದೆ.ಆಯ್ದ ರಾಷ್ಟ್ರಗಳ 150 ಭ್ರಷ್ಟಾಚಾರ ಪ್ರಕರಣಗಳನ್ನು ವಿಶ್ವ ಬ್ಯಾಂಕ್ ಪರಿಶೀಲಿಸಿದೆ. 80ಕ್ಕೂ ಅಧಿಕ ಪ್ರಕರಣಗಳಲ್ಲಿ ಕಾರ್ಪೊರೇಟ್ ಮಾರ್ಗವನ್ನೇ ಬಳಸಿಕೊಳ್ಳಲಾಗಿದ್ದು, ಭಾರತದಲ್ಲೂ ಇಂಥ 7 ಪ್ರಕರಣಗಳಿವೆ ಎಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry