ಬುಧವಾರ, ಅಕ್ಟೋಬರ್ 23, 2019
27 °C

ಕಪ್ಪುಹಣ ಒಪ್ಪಿಸಿದ ಉದ್ಯಮಿ

Published:
Updated:

ನವದೆಹಲಿ (ಪಿಟಿಐ): ಕಪ್ಪುಹಣದ ವಿಚಾರ ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗುತ್ತಿರುವ ಈ ಹೊತ್ತಿನಲ್ಲಿಯೇ, ದೆಹಲಿ ಮೂಲದ ಉದ್ಯಮಿ ಸತೀಶ್ ಸ್ವಾನೆ ಎಂಬುವವರು ಸ್ವಿಸ್ ಹಾಗೂ ಅಮೆರಿಕದ ಬ್ಯಾಂಕ್‌ಗಳಲ್ಲಿ ತಾವು ಇಟ್ಟಿರುವ ಕಪ್ಪುಹಣದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, 73 ಕೋಟಿ ರೂಪಾಯಿ ಬೇನಾಮಿ ಹಣವನ್ನು ಇಲಾಖೆಯ ಅಪರಾಧ ತನಿಖಾ ಘಟಕಕ್ಕೆ ಶುಕ್ರವಾರ ಒಪ್ಪಿಸಿದ್ದಾರೆ.ಇಲಾಖೆಯಲ್ಲಿ ನೂತನವಾಗಿ ರಚಿತವಾಗಿರುವ ಅಪರಾಧ ತನಿಖಾ ನಿರ್ದೇಶನಾಲಯದ (ಡಿಸಿಐ) ಅಧಿಕಾರಿಗಳ ತಂಡ ಸತೀಶ್ ಅವರ `ಸೈನಿಕ್ ಫಾರ್ಮ್~ನ ವೈಭವೋಪೇತ ಬಂಗಲೆ ಹಾಗೂ ದಕ್ಷಿಣ ಬಡಾವಣೆ-1ರ ಕಟ್ಟಡಗಳ ಮೇಲೆ ದಾಳಿ ನಡೆಸಿದ ಫಲವಾಗಿ ಈ ಮಾಹಿತಿಯು ಬಹಿರಂಗಗೊಂಡಿದೆ.ಬಂಗಲೆಯೊಳಗೆ ನಿಲ್ಲಿಸಿದ್ದ `ಎಸ್‌ಯುವಿ~ ವಾಹನದೊಳಗೆ ಅತ್ಯಂತ ಚಾಣಾಕ್ಷತನದಿಂದ ಇಟ್ಟಿದ್ದ ವಿದೇಶಿ ವಬ್ಯಾಂಕ್ ಖಾತೆಯ ವಿವರಗಳನ್ನು ನೋಡಿ ಅಧಿಕಾರಿಗಳು ದಂದಾದರು. ದೇಶ ಹಾಗೂ ವಿದೇಶಗಳಿಗೆ ಇಂಧನ ವಲಯದ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ವಾನೆ, ಪ್ರಸ್ತುತ ಆದಾಯ ತೆರಿಗೆ ಇಲಾಖೆಯ ವಶದಲ್ಲಿಇದ್ದಾರೆ.ಜೂರಿಚ್ ಹಾಗೂ ಸಿಂಗಪುರದಲ್ಲಿ ತಲಾ ಒಂದು, ಅಮೆರಿಕದಲ್ಲಿ ಮೂರು ಸೇರಿದಂತೆ ಸ್ವಾನೆ ಐದು ವಿದೇಶಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ.ಸ್ವಾನೆ ಅವರ ಬಗ್ಗೆ ನಿಖರ ಮಾಹಿತಿ ಪಡೆದ ಬಳಿಕ ಅವರ ಮನೆಗಳಲ್ಲಿ ಶೋಧವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ರೂ 1.5 ಕೋಟಿ ಮೌಲ್ಯದ ಆಭರಣಗಳು ಹಾಗೂ ರೂ 18 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅಲ್ಲದೆ ದೆಹಲಿಯಲ್ಲಿರುವ ಐಸಿಐಸಿಐ, ಎಚ್‌ಡಿಎಫ್‌ಸಿ, ಎಸ್‌ಬಿಐ ಸೇರಿದಂತೆ ಅವರ ಒಟ್ಟು 8 ಬ್ಯಾಂಕ್ ಖಾತೆಗಳಿಗೆ ಮೊಹರು ಹಾಕಲಾಗಿದ್ದು, ಸದ್ಯದಲ್ಲೇ ಅವುಗಳನ್ನು ತೆರೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.ವಿದೇಶಿ ಬ್ಯಾಂಕ್ ಖಾತೆಗೆ ಸಂಬಂಧಿಸಿದ ವರ್ಗೀಕೃತ ಮಾಹಿತಿ ಪಟ್ಟಿಗೂ ಸ್ವಾನೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೂಲಗಳು ತಿಳಿಸಿವೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)