ಬುಧವಾರ, ಮೇ 19, 2021
27 °C

ಕಪ್ಪುಹಣ ಪತ್ತೆಗೆ ನಿಯಮಾವಳಿ ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತೆರಿಗೆಗಳ್ಳರ ಬ್ಯಾಂಕ್ ಮತ್ತು ತೆರಿಗೆ ವಿವರಗಳನ್ನು ಭಾರತದೊಂದಿಗೆ ವಿನಿಮಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಲವು ವಿದೇಶಗಳು ಪ್ರಬಲ ನಿಯಮಾವಳಿಗಳನ್ನು ರೂಪಿಸುತ್ತಿವೆ. `ತೆರಿಗೆಗಳ್ಳರ ಸ್ವರ್ಗ~ಗಳಲ್ಲಿ ಅಡಗಿಸಿ ಇಡಲಾಗಿರುವ ಕಪ್ಪುಹಣವನ್ನು ಪತ್ತೆಹಚ್ಚುವ ಪ್ರಕ್ರಿಯೆಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎನ್ನಲಾಗಿದೆ.ಆಸ್ಟ್ರಿಯ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್, ಲಕ್ಸೆಂಬರ್ಗ್, ಬೆಲ್ಜಿಯಂ, ಕೇಮನ್ ಐಲ್ಯಾಂಡ್ಸ್ ಈಗಾಗಲೇ ಇದಕ್ಕೆ ಪೂರಕವಾಗಿ ನಿಯಮಾವಳಿ ರೂಪಿಸಿರುವ ಪ್ರಮುಖ ರಾಷ್ಟ್ರಗಳಾಗಿವೆ.ಪ್ಯಾರಿಸ್ ಮೂಲದ `ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ~ (ಒಇಸಿಡಿ)ಯ ನೇತೃತ್ವದಲ್ಲಿ ರಚಿತವಾಗಿರುವ `ಪಾರದರ್ಶಕತೆ ಮತ್ತು ತೆರಿಗೆ ಉದ್ದೇಶಕ್ಕಾಗಿ ಮಾಹಿತಿ ವಿನಿಮಯದ ಜಾಗತಿಕ ವೇದಿಕೆ~ಯ ಸದಸ್ಯ ರಾಷ್ಟ್ರವಾಗಿ ಭಾರತ ಈ ಮಾಹಿತಿಗಳನ್ನು ಪಡೆಯಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.