ಕಪ್ಪುಹಣ ಮಾಹಿತಿ ನೀಡಲು ಸಿದ್ಧ: ಜರ್ಮನಿ

7

ಕಪ್ಪುಹಣ ಮಾಹಿತಿ ನೀಡಲು ಸಿದ್ಧ: ಜರ್ಮನಿ

Published:
Updated:

ಪ್ಯಾರಿಸ್ (ಪಿಟಿಐ): ತನ್ನ ದೇಶದ ಬ್ಯಾಂಕ್‌ಗಳಲ್ಲಿ ಭಾರತೀಯ ನಾಗರಿಕರು ಹೊಂದಿರಬಹುದಾದ ರಹಸ್ಯ ಖಾತೆಗಳ ಕುರಿತು ಯಾವುದೇ ಮಾಹಿತಿಗಳನ್ನು ಬೇಕಾದರೂ ನೀಡಲು ಸಿದ್ಧವಿರುವುದಾಗಿ ಜರ್ಮನಿ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ಭರವಸೆ ನೀಡಿದೆ.ಶನಿವಾರ ಮುಕ್ತಾಯಗೊಂಡ ಜಿ-20 ರಾಷ್ಟ್ರಗಳ ಹಣಕಾಸು ಸಚಿವರ ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಸಭೆಯ ನಂತರ ಪ್ರಣವ್ ಮುಖರ್ಜಿ ಮತ್ತು ಜರ್ಮನಿಯ ವೊಲ್ಫ್‌ಗ್ಯಾಂಗ್ ಶಾಬೆಲ್ ನಡುವೆ ನಡೆದ ಉಭಯ ರಾಷ್ಟ್ರಗಳ ಹಣಕಾಸು ಸಚಿವರ ಮಾತುಕತೆಯಲ್ಲಿ ಜರ್ಮನಿ ಈ ಭರವಸೆ ನೀಡಿದೆ.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry