ಮಂಗಳವಾರ, ನವೆಂಬರ್ 12, 2019
19 °C

ಕಪ್ಪುಹಣ ವರದಿ ಮಾಸಾಂತ್ಯಕ್ಕೆ

Published:
Updated:

ನವದೆಹಲಿ(ಪಿಟಿಐ): ಕಪ್ಪುಹಣಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯ ಮಾಸಾಂತ್ಯದೊಳಗೆ  ವರದಿ ಸಲ್ಲಿಸಲಿದೆ ಎಂದು ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ತೆರಿಗೆ ವಂಚಿಸಿ ಸಂಗ್ರಹಿಸಿಟ್ಟಿರುವ ಕಪ್ಪುಹಣ ಕುರಿತು ರಾಷ್ಟ್ರೀಯ ಸಾರ್ವಜನಿಕ ಹಣಕಾಸು ನೀತಿ ಸಂಸ್ಥೆ(ಎನ್‌ಐಪಿಎಫ್‌ಪಿ), ರಾಷ್ಟ್ರೀಯ ಆನ್ವಯಿಕ ಆರ್ಥಿಕ ಸಂಶೋಧನೆ ಮಂಡಳಿ(ಎನ್‌ಸಿಎಇಆರ್)  ಮತ್ತು ರಾಷ್ಟ್ರೀಯ ಹಣಕಾಸು ನಿರ್ವಹಣೆ ಸಂಸ್ಥೆ(ಎನ್‌ಐಎಫ್‌ಎಂ) ಜಂಟಿಯಾಗಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿವೆ. ಈ ವರದಿಯ ಮೂಲಕ ದೇಶದ ಕಪ್ಪುಹಣದ ಪ್ರಮಾಣ(ಅಂದಾಜು) ಎಷ್ಟಿರಬಹುದು ಎಂಬುದು ತಿಳಿಯಲಿದೆ. ಏಪ್ರಿಲ್ ಅಂತ್ಯದೊಳಗೆ ವರದಿ ಸಲ್ಲಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆಯ ಅಂತರರಾಷ್ಟ್ರೀಯ ತೆರಿಗೆ ವಿಭಾಗದ ಮಹಾ ನಿರ್ದೇಶಕಿ ಪ್ರಮೀಳಾ ಭಾರದ್ವಾಜ್ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)