ಮಂಗಳವಾರ, ಅಕ್ಟೋಬರ್ 22, 2019
26 °C

ಕಪ್ಪುಹಣ: ವಿದೇಶಾಂಗ ವಿಭಾಗದಲ್ಲಿ ನೂತನ ಘಟಕ

Published:
Updated:

ನವದೆಹಲಿ (ಪಿಟಿಐ): ಕಪ್ಪುಹಣದ ಪಿಡುಗು ನಿಗ್ರಹಿಸುವ ದಿಸೆಯಲ್ಲಿ ಹಣಕಾಸು ಸಚಿವಾಲಯದಲ್ಲಿರುವ ಮಹತ್ವದ ವಿದೇಶಿ ತೆರಿಗೆ ವಿಭಾಗದ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ.ವಿದೇಶಿ ತೆರಿಗೆ ಇಲಾಖೆಯು ಭಾರತ ಹಾಗೂ ತೆರಿಗೆದಾರರ ಸ್ವರ್ಗ ಎನಿಸಿಕೊಂಡಿರುವ ದೇಶಗಳು ಮತ್ತು ಇತರ ದೇಶಗಳ ನಡುವೆ ವರ್ಗೀಕೃತ ತೆರಿಗೆಗೆ ಸಂಬಂಧಿಸಿದ ಮಾಹಿತಿಗಳ ಮೇಲ್ವಿಚಾರಣೆ ನಡೆಸುತ್ತದೆ.ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಡಿಯಲ್ಲಿ ವಿದೇಶ ತೆರಿಗೆ ಹಾಗೂ ತೆರಿಗೆ ಸಂಶೋಧನಾ (ಎಫ್‌ಟಿ ಮತ್ತು ಟಿಆರ್) ವಿಭಾಗ ತೆರೆಯಲು ಸಚಿವಾಲಯವು ಇತ್ತೀಚೆಗೆ ಅನುಮೋದನೆ ನೀಡಿದೆ.ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹಾಗೂ ಅಧೀನ ಕಾರ್ಯದರ್ಶಿ ಮಟ್ಟದ ಇಬ್ಬರು ಅಧಿಕಾರಿಗಳು ನೂತನ ವಿಭಾಗವನ್ನು ನಿರ್ವಹಿಸುವರು.ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಈ ವಿಭಾಗವು ಕಾನೂನು ಜಾರಿ ನಿರ್ದೇಶನಾಲಯದ ನಡುವೆ ಸಂಪರ್ಕ ಸಾಧಿಸಲು ಅಂಚೆ ಕಚೇರಿಯಂತೆ ಕಾರ್ಯ ನಿರ್ವಹಿಸಲಿದೆ.ಎಫ್‌ಟಿ ಹಾಗೂ ಆರ್‌ಟಿ ವಿಭಾಗದಲ್ಲಿ ಈವರೆಗೆ ಇಬ್ಬರು ನಿರ್ದೇಶಕರು ಇದ್ದರು. ಇದೀಗ ಹೊಸ ಘಟಕಗಳ ಸೇರ್ಪಡೆಯೊಂದಿಗೆ ಇಲ್ಲಿ ಐವರು ನಿರ್ದೇಶಕರು ಹಾಗೂ ಹಲವು ಅಧಿಕಾರಿಗಳು ಕಾರ್ಯ ನಿರ್ವಹಿಸುವರು. ಹಣಕಾಸು ಗುಪ್ತಚರ ಘಟಕ (ಎಫ್‌ಐಯು) ಕ್ರೋಡೀಕರಿಸಿದ ಅನುಮಾನಾಸ್ಪದ ವ್ಯವಹಾರಕ್ಕೆ ಸಂಬಂಧಿಸಿದ ವರದಿಗಳನ್ನು ಈ ಅಧಿಕಾರಿಗಳು ಪರಿಶೀಲಿಸುವರು.ವಿವಿಧ ದೇಶಗಳೊಂದಿಗೆ ಭಾರತವು, ದ್ವಿತೆರಿಗೆ ರದ್ದತಿ ಒಪ್ಪಂದ (ಡಿಟಿಎಎ) ಕುರಿತು ಮರುಸಂಧಾನ ಮಾಡಿಕೊಳ್ಳುತ್ತಿದೆ. 22 ದೇಶಗಳ ಜತೆ ಈಗಾಗಲೇ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೆ ಈವರೆಗೆ ಇಷ್ಟೇ ಸಂಖ್ಯೆಯಲ್ಲಿ ತೆರಿಗೆ ಮಾಹಿತಿ ವಿನಿಮಯ ಒಪ್ಪಂದ (ಟಿಐಇಎ) ಮಾಡಿಕೊಳ್ಳಲಾಗಿದೆ.ಎಫ್‌ಟಿ ಹಾಗೂ ಆರ್‌ಟಿ ವಿಭಾಗದ ಅಡಿಯಲ್ಲಿ `ಮಾಹಿತಿ ವಿನಿಮಯ ಘಟಕ~ ರಚಿಸಲು ಸಚಿವಾಲಯವು ನಿರ್ಧರಿಸಿದೆ. ದೇಶದಾದ್ಯಂತ ಆದಾಯ ತೆರಿಗೆ ಅಧಿಕಾರಿಗಳು ಅಕ್ರಮ ಹಣದ ಬಗ್ಗೆ ವಿದೇಶಗಳಿಂದ ಮಾಹಿತಿ ಪಡೆಯಲು ಈ ಘಟಕವನ್ನು ಸಂಪರ್ಕಿಸಬಹುದು.ದೇಶದ ಪ್ರಜೆಗಳ ಅನುಮಾನಾಸ್ಪದ ವ್ಯವಹಾರ ಕುರಿತಂತೆ ಭಾರತವು ಈವರೆಗೆ 9,900ಕ್ಕೂ ಮೇಲ್ಪಟ್ಟು ಮಾಹಿತಿ ತುಣುಕುಗಳನ್ನು ಪಡೆದುಕೊಂಡಿದೆ. ಈ ಮಾಹಿತಿಗಳು ಪರಿಷ್ಕರಣೆ ಹಾಗೂ ತನಿಖೆಯ ವಿವಿಧ ಹಂತಗಳಲ್ಲಿ ಇವೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)