ಕಪ್ಪುಹಣ ವಿವರ ಬಹಿರಂಗಕ್ಕೆ ಕಾಯ್ದೆ ತೊಡಕು

7

ಕಪ್ಪುಹಣ ವಿವರ ಬಹಿರಂಗಕ್ಕೆ ಕಾಯ್ದೆ ತೊಡಕು

Published:
Updated:

ನವದೆಹಲಿ (ಪಿಟಿಐ): ಭಾರತೀಯರು ವಿದೇಶದಲ್ಲಿ ಇಟ್ಟಿರುವ ಕಪ್ಪು ಹಣದ ವಿವರವನ್ನು ಬಹಿರಂಗ ಪಡಿಸಲು ಸಾಧ್ಯವೇ ಇಲ್ಲ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ತಿಳಿಸಿದರು.ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಹ ಕಪ್ಪುಹಣದ ಮಾಹಿತಿ ಬಯಲುಗೊಂಡರೆ ಸರ್ಕಾರ ಉರುಳುತ್ತದೆ ಎಂಬ ಭಯ ಕೇಂದ್ರಕ್ಕಿಲ್ಲ, ಆದರೆ ಈ ನಿಟ್ಟಿನಲ್ಲಿ ಕಾನೂನು ತೊಡಕು ಇರುವುದರಿಂದ ಮಾಹಿತಿ ಬಹಿರಂಗ ಅಸಾಧ್ಯ ಎಂದರು. ಕಪ್ಪು ಹಣ ಬಹಿರಂಗಕ್ಕೆ ಸರ್ಕಾರ ಹಿಂದೇಟು ಹಾಕುತ್ತಿರುವುದಕ್ಕೆ ವಿರೋಧ ಪಕ್ಷಗಳು ಮತ್ತು ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ಎತ್ತುತ್ತಿದ್ದರೂ ಸರ್ಕಾರ ಸುಮ್ಮನೆ ಇರುವುದು ಇದೇ ಕಾರಣಕ್ಕಾಗಿ ಎಂದು ಸಮರ್ಥಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry