ಕಪ್ಪುಹಣ: ಸೋನಿಯಾ ಮೌನ ಮುರಿಯಲಿ-ಎಲ್.ಕೆ.ಅಡ್ವಾಣಿ

7

ಕಪ್ಪುಹಣ: ಸೋನಿಯಾ ಮೌನ ಮುರಿಯಲಿ-ಎಲ್.ಕೆ.ಅಡ್ವಾಣಿ

Published:
Updated:
ಕಪ್ಪುಹಣ: ಸೋನಿಯಾ ಮೌನ ಮುರಿಯಲಿ-ಎಲ್.ಕೆ.ಅಡ್ವಾಣಿ

ಮುಂಬೈ, (ಪಿಟಿಐ): ಅನೇಕ ದಿನಗಳಿಂದ ಭ್ರಷ್ಟಾಚಾರ, ಕಪ್ಪುಹಣ ಮತ್ತು ಹಣದುಬ್ಬರದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಮೌನವಹಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಈಗಲಾದರೂ ತುಟಿ ಬಿಚ್ಚಲಿ ಎಂದು ಬಿಜೆಪಿ ಧುರೀಣ ಎಲ್.ಕೆ. ಅಡ್ವಾಣಿ ಅವರು ಸವಾಲು ಹಾಕಿದ್ದಾರೆ.`ದೇಶವನ್ನು ಕಾಡುತ್ತಿರುವ ಈ ಸಮಸ್ಯೆಗಳ ಕುರಿತು ಕೇವಲ ಕಾಂಗ್ರೆಸ್ ವಕ್ತಾರ ಅಥವಾ ಪ್ರಧಾನಿ ಮಾತನಾಡಿದ್ದಾರೆಯೇ ಹೊರತು ಪಕ್ಷದ ಅಧ್ಯಕ್ಷೆಯಾಗಿರುವ ಸೋನಿಯಾ ಒಮ್ಮೆಯೂ ಮೌನ ಮುರಿದಿಲ್ಲ. ಆದ್ದರಿಂದ ಅವರು ಈ ಕುರಿತು ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯ ತಿಳಿಸಬೇಕು~ ಎಂದು ಅವರು ಒತ್ತಾಯಿಸಿದರು.ದೇಶದ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಪ್ರಧಾನಿಗಿಂತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಶಕ್ತಿಶಾಲಿಯಾಗಿದ್ದಾರೆ. ಸಿಂಗ್ ಪ್ರಧಾನಿಯಾದ ಮೇಲೆ ಪ್ರಜಾತಂತ್ರದ ಬದಲು, ಸರ್ಕಾರದ ಮುಖ್ಯಸ್ಥರಿಗಿಂತ ಪಕ್ಷದ ಮುಖ್ಯಸ್ಥರು ಹೆಚ್ಚು ಶಕ್ತಿಶಾಲಿಯಾಗಿರುವ ಕಮ್ಯುನಿಸ್ಟ್ ಪಕ್ಷದ ವ್ಯವಸ್ಥೆ  ಜಾರಿಯಲ್ಲಿದೆ ಎಂದು ಅವರು ಲೇವಡಿ ಮಾಡಿದರು.ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಹಕ್ಕು ನಮ್ಮ ದೇಶಕ್ಕೆ ಸೂಕ್ತವಾದುದಲ್ಲ. ಇದು ಇಡೀ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಅಣ್ಣಾ ತಂಡದ ಕೋರಿಕೆಗೆ ಅಡ್ವಾಣಿ ಅಸಮ್ಮತಿ ವ್ಯಕ್ತಪಡಿಸಿದರು.ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪುಹಣವಿಟ್ಟ 700 ಜನರ ಪಟ್ಟಿಯಲ್ಲಿ ಮೂವರು ಸಂಸದರ ಹೆಸರು ಕೇಳಿಬಂದಿರುವ ವರದಿ ನಿಜವಾದಲ್ಲಿ ಕಪ್ಪುಹಣದ ವಿಷಯ ರಾಜಕೀಯ ವ್ಯವಸ್ಥೆಗೆ ಮತ್ತಷ್ಟು ಹತ್ತಿರ ಬಂತಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡರು ಹೇಳಿದರು.

 

 

   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry