ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

7

ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

Published:
Updated:

ಸ್ಪೀಕರ್ ರಾಜೀನಾಮೆಗೆ ಒತ್ತಾಯಿಸಿ ಎರಡು ದಿನಗಳಿಂದಲೂ ಒಂದಲ್ಲ ಒಂದು ರೀತಿಯ ಪ್ರತಿಭಟನೆ ನಡೆಯುತ್ತಿದೆ. ಬುಧವಾರ ಪಕ್ಷೇತರ ಸದಸ್ಯರ ಜತೆಗೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರೂ ಕಪ್ಪುಪಟ್ಟಿ ಧರಿಸಿ ತಮ್ಮ ಅಸಮಾಧಾನ ಹೊರಹಾಕಿದರು.

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಸದಸ್ಯರು ಎಡಗೈಗೆ ಕಪ್ಪುಪಟ್ಟಿ ಕಟ್ಟಿಕೊಂಡೇ ಸದನ ಪ್ರವೇಶಿಸಿದರು. ಇಡೀ ದಿನ ಹಾಗೆಯೇ ಇದ್ದರು. ಜೆಡಿಎಸ್‌ನ ಕೆಲ ಸದಸ್ಯರು ಮಾತ್ರ ಕಪ್ಪುಪಟ್ಟಿ ಕಟ್ಟಿಕೊಂಡಿದ್ದರು. ಐವರು ಪಕ್ಷೇತರ ಸದಸ್ಯರು ಟವೆಲ್‌ನ ಹಾಗೆ ಕೊರಳಿಗೆ ಕಪ್ಪು ಪಟ್ಟಿಯನ್ನು ಸುತ್ತಿಕೊಂಡು ಓಡಾಡುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry