ಸೋಮವಾರ, ಜನವರಿ 20, 2020
21 °C

ಕಪ್ಪು-ಬಿಳುಪಿನ ಚಿತ್ರಗಳಲ್ಲಿ ಜೀವಂತಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಡಿಜಿಟಲ್ ತಂತ್ರಜ್ಞಾನದಿಂದ ಫೋಟೊಗ್ರಾಫಿಕ್ ಕ್ಷೇತ್ರದಲ್ಲಿ ಭ್ರಾಮಕ ಹುಸಿ ಜಗತ್ತು ಸೃಷ್ಟಿಯಾಗುತ್ತಿದೆ ಎಂದು ಉಪನ್ಯಾಸಕ ಡಾ.ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.

ಸಾಗರ ಫೋಟೊಗ್ರಾಫಿಕ್ ಸೊಸೈಟಿ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿರುವ 11ನೇ ರಾಜ್ಯಮಟ್ಟದ ಛಾಯಾಚಿತ್ರ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ   ಅವರು ಮಾತನಾಡಿದರು.ಛಾಯಾಚಿತ್ರಗಳಲ್ಲಿ ನಿಜವಾದ ಜೀವಂತಿಕೆ  ವ್ಯಕ್ತವಾಗುವುದು ಕಪ್ಪು-ಬಿಳುಪಿನ ಚಿತ್ರಗಳಲ್ಲೇ. ಆದರೆ, ಬದಲಾಗಿರುವ ತಂತ್ರಜ್ಞಾನದ ಕಾರಣಕ್ಕೆ ಕಪ್ಪು-ಬಿಳುಪಿನ ಚಿತ್ರಗಳಿಗೆ ಇರುವ ಮಹತ್ವ ಕಡಿಮೆಯಾಗುತ್ತಿದೆ ಎಂದರು.ಫೋಟೊ ತೆಗೆಯಲು ಮತ್ತು ನೋಡಲು ಒಳಗಣ್ಣು ಇರಬೇಕು ಎಂಬ ವರಕವಿ ಬೇಂದ್ರೆ ಅವರ ಮಾತು ಎಂದಿಗೂ ಪ್ರಸ್ತುತವಾಗಿದೆ. ವಾಣಿಜ್ಯ ಹಾಗೂ ಕಲಾತ್ಮಕತೆ ಇವೆರಡೂ ಗುಣಗಳನ್ನು ಮೈಗೂಡಿಸಿಕೊಂಡಿರುವ ಫೋಟೊಗ್ರಫಿ ಸಾಮಾನ್ಯ ದೃಶ್ಯಗಳಲ್ಲಿನ ಅಸಾಮಾನ್ಯತೆಯನ್ನು ಹಿಡಿದಿಡುವ ವಿಶೇಷ ಗುಣವನ್ನು ಹೊಂದಿದೆ ಎಂದು ಹೇಳಿದರು.ಉಪ ವಿಭಾಗಾಧಿಕಾರಿ ಡಾ.ಜಿ.ಎಲ್. ಪ್ರವೀಣ್‌ಕುಮಾರ್ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಈ ಪ್ರದೇಶದಲ್ಲಿ ಹೆಸರು ಮಾಡಿರುವ ಛಾಯಾಚಿತ್ರ ಗ್ರಾಹಕರು ಇರುವುದು ವಿಶೇಷ ಸಂಗತಿಯಾಗಿದೆ. ಗುಣಮಟ್ಟದ ಛಾಯಾಚಿತ್ರಗಳ ಪ್ರದರ್ಶನಕ್ಕೆ ಆವಶ್ಯಕತೆ ಇರುವ ಸ್ಥಳಾವಕಾಶವನ್ನು ತಾಲ್ಲೂಕು ಆಡಳಿತ ಕಲ್ಪಿಸಲಿದೆ ಎಂದು ಹೇಳಿದರು.ಸಾವಿತ್ರಿ ವೆಂಕಟಗಿರಿರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಾಗರ ಪೋಟೊಗ್ರಾಫಿಕ್ ಸೊಸೈಟಿ ಏರ್ಪಡಿಸಿದ್ದ 11ನೇ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಅಂಗವಾಗಿ ಹೊರತಂದಿರುವ ಸ್ಮರಣ ಸಂಚಿಕೆಯನ್ನು ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವರ್ಷ  ಪ್ರಾರ್ಥಿಸಿದರು.ಕೆ.ಎಸ್. ರಾಜಾರಾಂ ಸ್ವಾಗತಿಸಿದರು. ಸೊಸೈಟಿ ಕಾರ್ಯದರ್ಶಿ ಕೆ. ಚಂದ್ರಶೇಖರ್ ವರದಿ ವಾಚಿಸಿದರು. ನಾಗರಾಜ್ ವಂದಿಸಿದರು. ಅರುಣ್ ಬಾಪಟ್ ನಿರೂಪಿಸಿದರು.

ಪ್ರತಿಕ್ರಿಯಿಸಿ (+)