ಕಪ್ಪು ವರ್ತುಲಕ್ಕೆ ಪರಿಹಾರ

7
ಚುಟುಕು ಚುರುಕು

ಕಪ್ಪು ವರ್ತುಲಕ್ಕೆ ಪರಿಹಾರ

Published:
Updated:

ರಕ್ತಹೀನತೆ, ನಿದ್ರಾಹೀನತೆ, ಅಲರ್ಜಿ, ಖಿನ್ನತೆ, ವಯಸ್ಸಾಗುವಿಕೆ ಅಥವಾ ವೈದ್ಯಕೀಯ ಕಾರಣದಿಂದ ನಿಮ್ಮ ಕಣ್ಣಿನ ಸುತ್ತ ಕಪ್ಪು ವರ್ತುಲ ಮೂಡಬಹುದು. ಇದು ಮುಖದ ಅಂದ ಕೆಡಿಸುವುದಷ್ಟೇ ಅಲ್ಲ, ಅನಾರೋಗ್ಯದ ಅನಾವರಣವೂ ಹೌದು. ಆದ್ದರಿಂದ ಕಣ್ಣಿನ ಕಪ್ಪು ವರ್ತುಲವನ್ನು ಹೋಗಲಾಡಿಸಲು ಇಲ್ಲಿವೆ ಕೆಲವು ಕ್ರಮಗಳು:*ಎರಡು ಅಥವಾ ಮೂರು ತುಂಡು ಸೌತೆ ಕಾಯಿಯನ್ನು ಬಳಸಿ ಜ್ಯೂಸ್ ತೆಗೆಯಿರಿ. ಎರಡು ಹತ್ತಿಯ ತುಣುಕುಗಳನ್ನು ತೆಗೆದುಕೊಂಡು ಆ ಜ್ಯೂಸ್‌ನಲ್ಲಿ ಅದ್ದಿ, ಅದನ್ನು ಕಣ್ಣಿನ ಮೇಲೆ ಇಟ್ಟುಕೊಂಡು ಕೆಲ ನಿಮಿಷ ವಿಶ್ರಮಿಸಿ. ಇದೇ ರೀತಿ 2-– 3 ಬಾರಿ ಮಾಡಿ. ಪ್ರತಿದಿನ ಹೀಗೆ ಮಾಡುವುದರಿಂದ ಕಣ್ಣಿಗೆ ತಂಪು ನೀಡುವುದಲ್ಲದೆ ಕಪ್ಪು ವರ್ತುಲವೂ ಮಾಯವಾಗುತ್ತದೆ.*ಉತ್ತಮ ಗುಣಮಟ್ಟದ ಅರಿಶಿಣದ ಪುಡಿಯನ್ನು ಅನಾನಸ್ ಹಣ್ಣಿನ ಜ್ಯೂಸ್‌ನಲ್ಲಿ ಬೆರೆಸಿ ಪೇಸ್ಟ್ ಮಾಡಿಕೊಂಡು ಕಪ್ಪು ವರ್ತುಲದ ಮೇಲೆ ಲೇಪಿಸಿಕೊಳ್ಳಿ. 10– -15 ನಿಮಿಷಗಳ ನಂತರ ಹತ್ತಿಯಿಂದ ಒರೆಸಿ ನಂತರ ತೊಳೆದುಕೊಳ್ಳಿ.*ಹಸಿರು ಸೇಬು ಹಣ್ಣನ್ನು ಬೇಯಿಸಿ ಪೇಸ್ಟ್ ಮಾಡಿ ಕಣ್ಣಿನ ಸುತ್ತ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ತೊಳೆಯಿರಿ. ಇದರಲ್ಲಿರುವ ಪೊಟ್ಯಾಷಿಯಂ, ವಿಟಮಿನ್ ಬಿ ಮತ್ತು ಸಿ ಕಪ್ಪು ವರ್ತುಲವನ್ನು ಹೋಗಲಾಡಿಸುವುದರ ಜೊತೆಗೆ ಆ ಚರ್ಮವನ್ನು ಆರೋಗ್ಯಕರವಾಗಿ ಇಡಲು ಸಹಕರಿಸುತ್ತವೆ.*ಹಲ್ಲು ನೋವಿನ ಉಪಶಮನಕ್ಕೆ ಎರಡು ಮೂರು ಲವಂಗಗಳನ್ನು ನುಣ್ಣಗೆ ಅರೆದು ಸ್ವಲ್ಪ ನಿಂಬೆ ರಸದೊಡನೆ ಸೇವಿಸಿ.ಉಪವಾಸ ಮಾಡದಿರಿ

ಉಪವಾಸವನ್ನು ಇವರೆಲ್ಲ ಮಾಡಬಾರದು: ಕ್ಯಾನ್ಸರ್ ರೋಗಿಗಳು, ಮಧುಮೇಹಿಗಳು, ಸಂಧಿವಾತ ಇರುವವರು, ಹೊಟ್ಟೆಯಲ್ಲಿ ಹುಣ್ಣಾಗಿರುವವರು, ಮೂತ್ರಕೋಶ, ಪಿತ್ತಜನಕಾಂಗ, ಶ್ವಾಸಕೋಶದ ತೊಂದರೆ ಇರುವವರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry