ಕಬಡ್ಡಿ ಆಟಗಾರ್ತಿಗೆ ಗುಂಡಿಕ್ಕಿದ ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಸಾವು

7

ಕಬಡ್ಡಿ ಆಟಗಾರ್ತಿಗೆ ಗುಂಡಿಕ್ಕಿದ ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಸಾವು

Published:
Updated:

ಪಟ್ನಾ:  ಕಬಡ್ಡಿ ಆಟಗಾರ್ತಿ ಮನಿಶಾ ಕುಮಾರಿಯನ್ನು ಎಕೆ.47 ರೈಫಲ್‌ನಿಂದ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಸ್ವಯಂ ಗುಂಡು ಹಾರಿಸಿಕೊಂಡು ಗಂಭೀರ ಸ್ಥಿತಿಯಲ್ಲಿ ಪಟ್ನಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲುಗೊಂಡಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ ಕಾನ್‌ಸ್ಟೆಬಲ್ ಗುರುವಾರ ತಡರಾತ್ರಿ ಮೃತಪಟ್ಟಿದ್ದಾನೆ.

ಈ ಮಧ್ಯೆ, ಮೊಯಿನುಲ್ ಹಕ್ ಕ್ರೀಡಾಂಗಣದಲ್ಲಿರುವ ಸಿಆರ್‌ಪಿಎಫ್ ಬೆಟಾಲಿಯನ್ ಅನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಟಗಾರರು ತೀವ್ರ ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಅರೆ ಸೇನಾ ಪಡೆಯು ಬಿಹಾರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದು, ನಕ್ಸಲ್ ಪೀಡಿತ ಜಮುಯಿ ಜಿಲ್ಲೆಯಲ್ಲಿ ತನಗೆ ಬದಲಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಕೋರಿದೆ.

‘ಸಿಆರ್‌ಪಿಎಫ್ ಸಿಬ್ಬಂದಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ದೊಡ್ಡ ಸಮಸ್ಯೆ. ಹಲವು ವರ್ಷಗಳಿಂದ ಕ್ರೀಡಾಂಗಣದ ಆವರಣದಲ್ಲಿ ಸಿಬ್ಬಂದಿ ಉಳಿದುಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಬೆಟಾಲಿಯನ್ ಇರುವುದು ಸಮಂಜಸವಲ್ಲ. ಆದ್ದರಿಂದ ನಮಗೆ ಜಮುಯಿನಲ್ಲಿ ವಸತಿ ಕಲ್ಪಿಸಿ ಎಂದು ಬಿಹಾರ ಸರ್ಕಾರವನ್ನು ಕೇಳಿಕೊಂಡಿದ್ದೇವೆ’ ಎಂದು ಸಿಆರ್‌ಪಿಎಫ್‌ನ ಐಜಿ ವಲ್ಸಾ ಕುಮಾರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry