ಕಬಡ್ಡಿ: ಎಚ್‌ಎಎಲ್‌ಗೆ ನಿರಾಸೆ, ಕೆಎಸ್‌ಪಿ ತಂಡ ಚಾಂಪಿಯನ್

6

ಕಬಡ್ಡಿ: ಎಚ್‌ಎಎಲ್‌ಗೆ ನಿರಾಸೆ, ಕೆಎಸ್‌ಪಿ ತಂಡ ಚಾಂಪಿಯನ್

Published:
Updated:

ದಾವಣಗೆರೆ: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡದವರು ನಗರದ ದ್ರೋಣ ಕ್ರೀಡಾ ಸಮಿತಿ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ ಆದರು.ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಕೆಎಸ್‌ಪಿ ತಂಡ 24-19 ರಲ್ಲಿ ಎಚ್‌ಎಎಲ್ ತಂಡವನ್ನು ಮಣಿಸಿತು. ಸೊಗಸಾದ ಪ್ರದರ್ಶನ ನೀಡಿದ ಪೊಲೀಸ್ ತಂಡದವರು ವಿರಾಮದ ವೇಳೆಗೆ 13-5 ಪಾಯಿಂಟ್‌ಗಳ ಮುನ್ನಡೆ ಪಡೆದಿದ್ದರು. ಪಂದ್ಯದ ಎರಡನೇ ಅವಧಿಯಲ್ಲಿ ಎಚ್‌ಎಎಲ್ ತಂಡ ಮರುಹೋರಾಟದ ಸೂಚನೆ   ನೀಡಿತಾದರೂ, ಗೆಲುವನ್ನು       ತನ್ನದಾಗಿಸಿಕೊಳ್ಳಲು ವಿಫಲವಾಯಿತು.ಎಚ್‌ಎಎಲ್ ತಂಡದ ಆಟಗಾರ ಶಾಜು `ಉತ್ತಮ ದಾಳಿಗಾರ~ ಪ್ರಶಸ್ತಿಗೆ ಭಾಜನರಾದರು. ವಿಜಯಾ ಬ್ಯಾಂಕ್ ತಂಡದ ಕೆಟಿ ಅವರಿಗೆ `ಉತ್ತಮ ಹಿಡಿತಗಾರ~ ಹಾಗೂ ಕೆಎಸ್‌ಪಿ ತಂಡದ ರಮೇಶ್ `ಸರ್ವೋತ್ತಮ ಆಟಗಾರ~ ಪ್ರಶಸ್ತಿ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry