ಕಬಡ್ಡಿ: ಎಸ್‌ಬಿಎಂ ತಂಡದ ಶುಭಾರಂಭ

7

ಕಬಡ್ಡಿ: ಎಸ್‌ಬಿಎಂ ತಂಡದ ಶುಭಾರಂಭ

Published:
Updated:

ಬೆಂಗಳೂರು: ಸೊಗಸಾದ ಪ್ರದರ್ಶನ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ತಂಡದ ವರು ಶುಕ್ರವಾರ ಇಲ್ಲಿ ಆರಂಭವಾದ ಅಖಿಲ ಭಾರತ `ಎ~ ಗ್ರೇಡ್ ಆಹ್ವಾನಿತ ಕಬಡ್ಡಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.ರಾಮನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಎಸ್‌ಬಿಎಂ 56-4 ಪಾಯಿಂಟ್‌ಗಳಿಂದ ಸೆವೆನ್ ಸ್ಟಾರ್ಸ್‌ ತಂಡವನ್ನು ಸೋಲಿಸಿತು.ಈ ಪಂದ್ಯ ಆರಂಭದಲ್ಲಿ ಕೊಂಚ ರೋಚಕತೆಯಿಂದ ಕೂಡಿತ್ತು. ಎಸ್‌ಬಿಎಂ ತಂಡದವರು ಚುರುಕಾದ ಪ್ರದರ್ಶನ ನೀಡಿ ಆರಂಭದಲ್ಲಿ ಮೇಲುಗೈ ಸಾಧಿಸಿದರು. ಇದರಿಂದ ಅವರಿಗೆ ಗೆಲುವು ಸುಲಭವಾಗಿ ದಕ್ಕಿತು.

ಇನ್ನುಳಿದ ಪಂದ್ಯಗಳಲ್ಲಿ ಎಂಇಜಿ 26-19 ಪಾಯಿಂಟ್‌ಗಳಿಂದ ಆಂಧ್ರಾ ಬ್ಯಾಂಕ್ ಎದುರೂ, ಗ್ರೀನ್ ಆರ್ಮಿ 51-14 ಪಾಯಿಂಟ್‌ಗಳಿಂದ ಅರುಣ ತಂಡದ ವಿರುದ್ಧವೂ, ವೆಸ್ಟರ್ನ್ ರೈಲ್ವೆ 31-27 ಪಾಯಿಂಟ್‌ಗಳಿಂದ ಪಶ್ಚಿಮ ಬಂಗಾಳದ ಮೇಲೂ ಗೆಲುವು ಸಾಧಿಸಿದವು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry