ಸೋಮವಾರ, ಡಿಸೆಂಬರ್ 16, 2019
18 °C

ಕಬಡ್ಡಿ: ಕ್ವಾರ್ಟರ್‌ಫೈನಲ್‌ಗೆ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಬಡ್ಡಿ: ಕ್ವಾರ್ಟರ್‌ಫೈನಲ್‌ಗೆ ಕರ್ನಾಟಕ

ಧಾರವಾಡ: ಆತಿಥೇಯ ಕರ್ನಾಟಕದ ಬಾಲಕ-ಬಾಲಕಿಯರ ತಂಡಗಳೆರಡೂ ಇಲ್ಲಿಯ ಎನ್.ಎ. ಮುತ್ತಯ್ಯ ಸ್ಮಾರಕ ಪೊಲೀಸ್ ವಸತಿ ಶಾಲೆ ಮೈದಾನದಲ್ಲಿ ನಡೆದಿರುವ 17 ವರ್ಷದೊಳಗಿನವರ 57ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಕ್ವಾರ್ಟರ್ ಫೈನಲ್‌ಗೆ ತಮ್ಮ ಪ್ರವೇಶ ಖಚಿತಪಡಿಸಿಕೊಂಡಿವೆ.ಸಂಜೆ ನಡೆದ ಬಾಲಕರ ವಿಭಾಗದ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ 28-15 (16-6)ರಿಂದ ಮಧ್ಯ ಪ್ರದೇಶ ತಂಡವನ್ನು ಪರಾಭವಗೊಳಿಸಿತು. ರಾಜ್ಯ ತಂಡದ ಪರಶುರಾಮ ದಾಳಿಯಲ್ಲಿ ಮಿಂಚಿದರೆ ಕಾರ್ತಿಕ್ ರಕ್ಷಣೆಯಲ್ಲಿ ಗಮನ ಸೆಳೆದರು.ಬಾಲಕಿಯರ ವಿಭಾಗದ ಪಂದ್ಯದಲ್ಲಿ ಕರ್ನಾಟಕ ತಂಡ 18-2 (13-1)ರಿಂದ ಕೇರಳ ತಂಡದ ವಿರುದ್ಧ ನಿರಾಯಾಸವಾಗಿ ಜಯಿಸಿತು. ತಂಡದ ಗೆಲುವಿನಲ್ಲಿ ಶಾರದಾ ಮತ್ತು ಅಪೂರ್ವಾ ಮಹತ್ವದ ಪಾತ್ರ ವಹಿಸಿದರು.

ಬೆಳಿಗ್ಗೆ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 51-5ರಿಂದ ಜಮ್ಮು -ಕಾಶ್ಮೀರ ತಂಡವನ್ನು ಪರಾಭವಗೊಳಿಸಿತ್ತು. ತಮ್ಮ ಗುಂಪಿನ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದ ಕರ್ನಾಟಕ ತಂಡಗಳು ಕ್ವಾರ್ಟರ್‌ಫೈನಲ್ ದಾರಿಯನ್ನು ಖಚಿತಪಡಿಸಿಕೊಂಡವು.ಬಾಲಕರ ವಿಭಾಗದ ಇತರ ಲೀಗ್ ಪಂದ್ಯಗಳಲ್ಲಿ ಹರಿಯಾಣ ತಂಡ 28-22 (9-7)ರಿಂದ ಉತ್ತರ ಪ್ರದೇಶ ತಂಡದ ವಿರುದ್ಧವೂ; ಆಂಧ್ರ ಪ್ರದೇಶ ತಂಡ 39-24 (17-9)ರಿಂದ ಹಿಮಾಚಲ ಪ್ರದೇಶ ತಂಡದ ಮೇಲೂ ಜಯ ಸಾಧಿಸಿದವು.ಬಾಲಕಿಯರ ವಿಭಾಗದ ಇತರ ಲೀಗ್ ಪಂದ್ಯಗಳಲ್ಲಿ ರಾಜಸ್ತಾನ 38-16 (30-6)ರಿಂದ ವಿದ್ಯಾಭಾರತಿ ತಂಡವನ್ನು; ಪಶ್ಚಿಮ ಬಂಗಾಲ  16-10 (5-2)ರಿಂದ ದೆಹಲಿ ತಂಡವನ್ನು; ಪಂಜಾಬ್ 28-9 (15-4)ರಿಂದ ಮಧ್ಯ ಪ್ರದೇಶ ತಂಡವನ್ನು; ಮಾಹಾರಾಷ್ಟ್ರ ತಂಡ 26-11 (11-6)ರಿಂದ ಪಶ್ಚಿಮ ಬಂಗಾಲ ತಂಡವನ್ನುಪರಭವಗೊಳಿಸಿದವು.

ಪ್ರತಿಕ್ರಿಯಿಸಿ (+)