ಕಬಡ್ಡಿ ಟೂರ್ನಿ: ಎಸ್‌ಬಿಎಂ ತಂಡ ಚಾಂಪಿಯನ್

7

ಕಬಡ್ಡಿ ಟೂರ್ನಿ: ಎಸ್‌ಬಿಎಂ ತಂಡ ಚಾಂಪಿಯನ್

Published:
Updated:
ಕಬಡ್ಡಿ ಟೂರ್ನಿ: ಎಸ್‌ಬಿಎಂ ತಂಡ ಚಾಂಪಿಯನ್

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ತಂಡದವರು ವಿಜಯ ಬ್ಯಾಂಕ್ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಆಹ್ವಾನಿತ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ ಆದರು.ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಹಣಾಹಣಿಯಲ್ಲಿ ಭಾರತ ತಂಡದ ಮಾಜಿ ನಾಯಕ ಬಿ.ಸಿ. ರಮೇಶ್ ನೇತೃತ್ವದ ಎಸ್‌ಬಿಎಂ 36-28 ಪಾಯಿಂಟ್ಸ್‌ನಿಂದ ವಿಜಯ ಬ್ಯಾಂಕ್ ತಂಡವನ್ನು ಮಣಿಸಿತು.ವಿಜಯಿ ತಂಡ ವಿರಾಮದ ವೇಳೆಗೆ 18-9ರಲ್ಲಿ ಮುನ್ನಡೆಯಲ್ಲಿತ್ತು. ವಿರಾಮದ ನಂತರ 18 ಪಾಯಿಂಟ್ಸ್ ಕಲೆ ಹಾಕಿ ಗೆಲುವಿನ ಅಂತರ ಹೆಚ್ಚಿಸಿಕೊಂಡಿತು.ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ವಿಜಯ ಬ್ಯಾಂಕ್ 34-26 (ವಿರಾಮದ ವೇಳೆ 29-9) ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಮೇಲೂ, ಎಸ್‌ಬಿಎಂ 33-12 (ವಿರಾಮದ ವೇಳೆ 19-8) ಆರ್‌ಡಬ್ಲ್ಯುಎಫ್ ವಿರುದ್ಧವೂ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದವು.ವೈಯಕ್ತಿಕ ಪ್ರಶಸ್ತಿಗಳು: ಅತ್ಯುತ್ತಮ ದಾಳಿಗಾರ: ಪ್ರಶಾಂತ್ (ವಿಜಯ ಬ್ಯಾಂಕ್), ಹಿಡಿತಗಾರ: ಜೀವಾ ಕುಮಾರ್ (ಎಸ್‌ಬಿಎಂ) ಹಾಗೂ ಸರ್ವೋತ್ತಮ ಆಟಗಾರ: ಸುರೇಶ್ ಕುಮಾರ್ (ಎಸ್‌ಬಿಎಂ).ಟ್ರೋಫಿ ಪ್ರಧಾನ: ಚಾಂಪಿಯನ್ ಎಸ್‌ಬಿಎಂ ತಂಡಕ್ಕೆ ವಿಜಯ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್. ಉಪೇಂದ್ರ ಕಾಮತ್ ಪ್ರಶಸ್ತಿ ಪ್ರದಾನ ಮಾಡಿದರು. ವಿಜೇತ ತಂಡ 50,000 ಹಾಗೂ ರನ್ನರ್ ಅಪ್ ವಿಜಯ ಬ್ಯಾಂಕ್ 30,000 ರೂ. ಬಹುಮಾನ ಜೇಬಿಗಿಳಿಸಿತು. ಈ ವೇಳೆ ಬೆಂಗಳೂರು ಜಿಲ್ಲಾ ಕಬಡ್ಡಿ ಸಂಸ್ಥೆ ಜಂಟಿ ಕಾರ್ಯದರ್ಶಿ ಬಾಲಾಜಿ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry