ಕಬಡ್ಡಿ ತಂಡಕ್ಕೆ ಮಮತಾ ನಾಯಕಿ

7

ಕಬಡ್ಡಿ ತಂಡಕ್ಕೆ ಮಮತಾ ನಾಯಕಿ

Published:
Updated:

ಪಾಟ್ನಾ (ಪಿಟಿಐ): ಕರ್ನಾಟಕದ ಕಬಡ್ಡಿ ಆಟಗಾರ್ತಿ ರೈಲ್ವೆಸ್‌ನ ಮಮತಾ ಪೂಜಾರಿ ಮಾರ್ಚ್ 1ರಿಂದ ಇಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್ ಕಬಡ್ಡಿ ಚಾಂಪಿಯನ್‌ಷಿಪ್‌ಗೆ ಭಾರತ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ಭಾರತ ಅಮೆಚೂರ್ ಕಬಡ್ಡಿ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ವಿಜಯ್ ಕುಮಾರ್ 12 ಆಟಗಾರ್ತಿಯರನ್ನೊಳಗೊಂಡ ತಂಡವನ್ನು ಶನಿವಾರ ಪ್ರಕಟಿಸಿದರು. ನಾಲ್ಕು ದಿನ ನಡೆಯುವ ಈ ಟೂರ್ನಿಯಲ್ಲಿ ಆತಿಥೇಯ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಜಪಾನ್, ಚೈನೀಸ್ ತೈಪೆ, ಥಾಯ್ಲೆಂಡ್, ಕೊರಿಯಾ, ಇಂಡೋನೇಷ್ಯಾ, ಕೆನಡಾ, ಇಟಲಿ, ಮೆಕ್ಸಿಕೊ, ಮಲೇಷ್ಯಾ, ಇರಾನ್ ಹಾಗೂ ಅಮೆರಿಕ ತಂಡಗಳು ಪಾಲ್ಗೊಳ್ಳಲಿವೆ.

ಒಟ್ಟು 16 ತಂಡಗಳು ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ಜರುಗಲಿವೆ. ಪ್ರತಿ ಗುಂಪಿನಲ್ಲಿ ಮೊದಲೆರೆಡು ಸ್ಥಾನ ಪಡೆದ ತಂಡಗಳು ಕ್ವಾರ್ಟರ್‌ಫೈನಲ್ ಪ್ರವೇಶಿಸಲಿವೆ.ತಂಡ ಇಂತಿದೆ: ಮಮತಾ ಪೂಜಾರಿ (ನಾಯಕಿ), ದೀಪಿಕಾ ಹೆನ್ರಿ ಜೋಸೆಫ್ (ಉಪ ನಾಯಕಿ),ಬಿ. ಸುವರ್ಣಾ, ಪ್ರಿಯಾಂಕ ನೇಗಿ, ಪ್ರಿಯಾಂಕ, ಪ್ರಮೀಳಾ, ಕವಿತಾ ದೇವಿ, ಎಂ. ಅಭಿಲಾಷಾ, ರಶ್ಮಿ ಸಾಹು, ಕೃಷ್ಣಾ, ಆರ್. ನಾಗಲಕ್ಷ್ಮೀ, ವಿಂದ್ಯಾವಾಶಿಣಿ ಸಿನ್ಹಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry