ಮಂಗಳವಾರ, ಅಕ್ಟೋಬರ್ 15, 2019
29 °C

ಕಬಡ್ಡಿ: ದೈಹಿಕ ಶಿಕ್ಷಕರ ಪ್ರತಿಭಟನೆ

Published:
Updated:

ಧಾರವಾಡ: ಸಂಘಟನಾ ಸಮಿತಿ ಸದಸ್ಯರು ತಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಇಲ್ಲಿಯ ಪೊಲೀಸ್ ವಸತಿ ಶಾಲೆ ಮೈದಾನದಲ್ಲಿ ನಡೆದಿರುವ ರಾಷ್ಟ್ರೀಯ 17 ವರ್ಷದೊಳಗಿನವರ ಕಬಡ್ಡಿ ಟೂರ್ನಿಯಲ್ಲಿ ಬುಧವಾರ 80ಕ್ಕೂ ಅಧಿಕ ದೈಹಿಕ ಶಿಕ್ಷಕರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ರಾಷ್ಟ್ರೀಯ ಶಾಲಾ ಕಬಡ್ಡಿ ಟೂರ್ನಿಯ ಯಶಸ್ಸಿಗಾಗಿ ಶ್ರಮಿಸಲು ಈ ದೈಹಿಕ ಶಿಕ್ಷಕರು ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ್ದಾರೆ. `ದೂರದಿಂದ ಬಂದ ನಮಗೆ ಇಡೀ ದಿನ ದುಡಿದರೂ ಸರಿಯಾದ ಊಟದ ವ್ಯವಸ್ಥೆ ಮಾಡಲಾಗಿಲ್ಲ. ಟೋಕನ್ ಇದ್ದರೂ ಊಟ ಸಿಕ್ಕಿಲ್ಲ. ಕ್ರೀಡಾಪಟುಗಳಿಗೂ ತೊಂದರೆಯಾ ಗಿದೆ. ಕೇಳಲು ಹೋದರೆ ಸಂಘಟನೆ ಹೊಣೆ ಹೊತ್ತವರು ನಮಗೆ ದಬಾಯಿಸಲು ಬರುತ್ತಾರೆ~ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.`ಬೇರೆ ರಾಜ್ಯಗಳಿಂದ ಬಂದ ಕ್ರೀಡಾಪಟುಗಳಿಗೆ ಮಾಡಲಾದ ವ್ಯವಸ್ಥೆ ಪರಿಶೀಲಿಸಲು ಉಪ ವಿಭಾಗಾಧಿಕಾ ರಿಗಳು ಹಾಗೂ ತಹಸೀಲ್ದಾರರು ಬಂದಿದ್ದರು. ಹೊಲಸಾಗಿದ್ದ ಜಮಖಾನೆ ಹಾಗೂ ಇತರ ಅವ್ಯವಸ್ಥೆ ಕಂಡು ನಮ್ಮನ್ನೇ ದೂಷಿಸಿದರು. ಏನೂ ಗೊತ್ತಿಲ್ಲದ ನಾವು ಜಿಲ್ಲೆಯ ಮೇಲಿನ ಅಭಿಮಾನದಿಂದ ದುಡಿಯಲು ಬಂದಿ ದ್ದೆವು. ಸಂಘಟಕರು ಬಚಾವಾದರೆ ನಾವು ಬೈಗುಳ ತಿನ್ನಬೇಕಾಯಿತು~ ಎಂದು ಅವರು ದೂರಿದರು.`ಟೂರ್ನಿ ನಡೆದಿರುವ ಪೊಲೀಸ್ ವಸತಿ ಶಾಲೆಯ ದೈಹಿಕ ಶಿಕ್ಷಕ ಪ್ರಮೋದ ರೋಣದ ಸಹ ಉಳಿದ ದೈಹಿಕ ಶಿಕ್ಷಕರ ಮೇಲೆ ಜೋರು ನಡೆಸಲು ಬರುತ್ತಾರೆ. ರಾಷ್ಟ್ರಮಟ್ಟದಲ್ಲಿ ಧಾರವಾಡಕ್ಕೆ ಕೆಟ್ಟ ಹೆಸರು ಬರಬಾರ ದು ಎಂಬ ಉದ್ದೇಶದಿಂದ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದೇವೆ. ಆದ್ದರಿಂದಲೇ ಕರ್ತವ್ಯ ಬಿಟ್ಟು ಹೊರ ಬಂದು ಮೌನವಾಗಿ ಪ್ರತಿಭಟಿಸಿದ್ದೇವೆ~ ಎಂದು ಅವರು ಸಿಟ್ಟಿನಿಂದ ಹೇಳಿದರು.ಸುರೇಶ ಜಗ್ಗಣ್ಣವರ, ಎಚ್.ಬಿ.ದಳವಾಯಿ, ಗುರು ಸೊಪ್ಪಿನ, ಐ.ಎಂ. ಪಾಟೀಲ, ಎಫ್.ಎ.ಚಿಕ್ಕನರ್ತಿ, ಬಿ.ಎಲ್. ಮಲ್ಲಿಗವಾಡ, ಬಿ.ವೈ. ಹೊಸಮನಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಊಟದ ಅವ್ಯವಸ್ಥೆ ವಿಷಯವಾಗಿ ಟೂರ್ನಿಯ ಆರಂಭಿಕ ದಿನದಿಂದಲೇ ದೂರುಗಳು ಕೇಳಿಬಂದಿದ್ದವು. `ಆಯಾ ರಾಜ್ಯದ ವ್ಯವಸ್ಥಾಪಕರು ಊಟಕ್ಕೆ ಬರುವ ಬಗೆಗೆ ಮುಂಚಿತವಾಗಿ ಸೂಕ್ತ ಮಾಹಿತಿ ನೀಡದ್ದರಿಂದ ಊಟದ ವ್ಯವಸ್ಥೆಯಲ್ಲಿ ತುಸು ಗೊಂದಲ ಉಂಟಾಗಿದ್ದು ನಿಜ. ಆದರೆ, ಎಲ್ಲವನ್ನೂ ಸರಿಪಡಿಸಲಾಗಿದೆ~ ಎಂದು ರೋಣದ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.

Post Comments (+)