ಕಬಡ್ಡಿ ಪ್ರೀಮಿಯರ್ ಲೀಗ್: ಹೈದರಾಬಾದ್ ತಂಡಕ್ಕೆ ಗೆಲುವು

ಗುರುವಾರ , ಜೂಲೈ 18, 2019
28 °C

ಕಬಡ್ಡಿ ಪ್ರೀಮಿಯರ್ ಲೀಗ್: ಹೈದರಾಬಾದ್ ತಂಡಕ್ಕೆ ಗೆಲುವು

Published:
Updated:

ವಿಜಯವಾಡ: ಹೈದರಾಬಾದ್ ಹಾರ್ಸಸ್ ತಂಡದವರು ಇಲ್ಲಿ ನಡೆಯುತ್ತಿರುವ ಕಬಡ್ಡಿ ಪ್ರೀಮಿಯರ್‌ಲೀಗ್‌ನ (ಕೆಪಿಎಲ್) ಚೊಚ್ಚಲ ಆವೃತ್ತಿಯ ಪಂದ್ಯದಲ್ಲಿ ಗೆಲುವು ಪಡೆದರು.ಇಲ್ಲಿನ ಡಿಆರ್‌ಆರ್ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರೋಚಕ ಹಣಾಹಣಿಯ ಪಂದ್ಯದಲ್ಲಿ ಹೈದರಾಬಾದ್ ಹಾರ್ಸಸ್ ತಂಡ 58-53 ಪಾಯಿಂಟ್‌ಗಳಿಂದ ರಾಜಸ್ತಾನ ರೈಡರ್ಸ್ ತಂಡವನ್ನು `ರೈಡ್~ ಮಾಡಿ ಗೆಲುವಿನ ನಗೆ ಬೀರಿತು.ದಿನದ ಇನ್ನೊಂದು ಪಂದ್ಯದಲ್ಲಿ ಅಂಗೊಲೆ ಬುಲ್ಸ್ ತಂಡ 31-29ಪಾಯಿಂಟ್‌ಗಳಿಂದ ಲ್ಯಾನ್ಸೊ  ಲಯನ್ಸ್ ತಂಡವನ್ನು ಮಣಿಸಿ ಗೆಲುವನ್ನು ತನ್ನದಾಗಿಸಿಕೊಂಡಿತು.ವಿಜಯಿ ತಂಡ ವಿರಾಮದ ವೇಳೆಗೆ 13-11ಪಾಯಿಂಟ್‌ಗಳ ಮುನ್ನಡೆಯನ್ನು ಹೊಂದಿತ್ತು. ನಂತರ ಉಭಯ ತಂಡಗಳು ಚುರುಕಿನ ಆಟವಾಡಿದವು. ಆದರೆ ಆನಂದ್ ಅಂಗೋಲ್ಸ್ ಕೊನೆಗೂ ಗೆಲುವು ಪಡೆಯುವಲ್ಲಿ ಯಶಸ್ಸು ಕಂಡಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry