ಕಬಡ್ಡಿ: ಬಿಸಿಪಿ ತಂಡಕ್ಕೆ ಗೆಲುವು

7

ಕಬಡ್ಡಿ: ಬಿಸಿಪಿ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಬಿಸಿಪಿ ಬೆಂಗಳೂರು ಪುರುಷರ ತಂಡದವರು ರಾಮನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ `ಎ~ ಗ್ರೇಡ್ ಆಹ್ವಾನಿತ ಕಬಡ್ಡಿ ಟೂರ್ನಿಯ ಶನಿವಾರದ ಪಂದ್ಯದಲ್ಲಿ 57-16ಪಾಯಿಂಟ್‌ಗಳಿಂದ ಬಿವೈಎಸ್ ಬೆಂಗಳೂರು ತಂಡವನ್ನು ಸೋಲಿಸಿದರು.ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡ ವಿರಾಮದ ವೇಳೆಗೆ 31-7ರಲ್ಲಿ ಮುನ್ನಡೆ ಹೊಂದಿತ್ತು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಆರ್‌ಡಬ್ಲ್ಯುಎಫ್ 43-16ರಲ್ಲಿ ಎಸ್‌ಎಐ ಧಾರವಾಡ ತಂಡದ ಮೇಲೂ, ಹರಿಯಾಣ 40-12ರಲ್ಲಿ ರಾಮನಗರದ ಯಂಗ್ ಬಾಯ್ಸ ವಿರುದ್ಧವೂ, ದೆಹಲಿಯ ಗ್ರೀನ್ ಆರ್ಮಿ 20-15ರಲ್ಲಿ ಹೂಡಿ ಬೆಂಗಳೂರು ತಂಡದ ಮೇಲೂ, ಎಚ್‌ಎಎಲ್ 38-12ರಲ್ಲಿ ಬಾಗಲಕೋಟೆ ಜಿಲ್ಲಾ ತಂಡದ ವಿರುದ್ಧವೂ, ಕೆಪಿಟಿಸಿಎಲ್ 43-10ರಲ್ಲಿ ಅರುಣ್ ಸ್ಪೋರ್ಟ್ಸ್ ಕ್ಲಬ್ ಮೇಲೂ, ಎಸ್‌ಬಿಎಂ 40-18ರಲ್ಲಿ ಆಂಧ್ರಾ ಬ್ಯಾಂಕ್ ವಿರುದ್ಧವೂ ಜಯಿಸಿತು.ಎಂಇಜಿ ಬೆಂಗಳೂರು ತಂಡ 68-16ರಲ್ಲಿ ಸ್ಟಾರ್ ಸಿಪಿಟಿ ಮೇಲೂ, ಆರ್‌ಡಬ್ಲ್ಯುಎಫ್ 50-17ರಲ್ಲಿ ಬಿವೈಎಸ್ ವಿರುದ್ಧವೂ ವಿಜಯ ಪಡೆಯಿತು.ಮಹಿಳಾ ವಿಭಾಗದಲ್ಲಿ ಆಳ್ವಾಸ್ ಮೂಡುಬಿದಿರೆ 25-14ರಲ್ಲಿ ಹರಿಯಾಣದ ಬಾಬಾ ಹರಿದಾಸ್ ತಂಡದ ಮೇಲೂ, ಪಶ್ಚಿಮ ಬಂಗಾಳ 39-27ರಲ್ಲಿ ಬೆಂಗಳೂರಿನ ಮೆಹ್ತಾ ವಿರುದ್ಧವೂ ಜಯ ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry