ಕಬಡ್ಡಿ: ಭೂಮಿಕಾ ತಂಡಕ್ಕೆ ಪ್ರಶಸ್ತಿ

7

ಕಬಡ್ಡಿ: ಭೂಮಿಕಾ ತಂಡಕ್ಕೆ ಪ್ರಶಸ್ತಿ

Published:
Updated:

ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಭೂಮಿಕಾ ತಂಡದವರು ಇಲ್ಲಿ ನಡೆದ ನ್ಯೂ ಮಹಾದೇವ ಯುವಕ ಮಂಡಳ ಆಶ್ರಯದ ರಾಷ್ಟ್ರಮಟ್ಟದ ಮುಕ್ತ ಕಬಡ್ಡಿ ಟೂರ್ನಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 



ಮಂಗಳವಾರ ಮಧ್ಯರಾತ್ರಿ ನಡೆದ ಫೈನಲ್‌ ಪಂದ್ಯದಲ್ಲಿ ಭೂಮಿಕಾ ತಂಡ 20–11 ಪಾಯಿಂಟ್‌ಗಳಿಂದ ಬೆಂಗಳೂರಿನ ರೈಲ್ವೆ ಕಾಲೊನಿ ತಂಡವನ್ನು ಮಣಿಸಿ ₨ 40 ಸಾವಿರ ನಗದು ಬಹುಮಾನವನ್ನು ಪಡೆದರು.



ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸಿದ ಭೂಮಿಕಾ ತಂಡ ಪ್ರಥಮಾರ್ಧದಲ್ಲಿ 8–4 ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದ ಒಂದು ಹಂತದಲ್ಲಿ ಬೆಂಗಳೂರು ತಂಡ ಮರುಹೋರಾಟ ಪ್ರದರ್ಶಿಸುವ ಸೂಚನೆ ನೀಡಿತಾದರೂ ಅದರಿಂದ ಪಂದ್ಯದ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಉಂಟಾಗಲಿಲ್ಲ.



ಬೆಂಗಳೂರು ರೈಲ್ವೆ ಕಾಲೊನಿ ತಂಡದ ಮಹೇಶ ಉತ್ತಮ ರೈಡರ್‌ ಪ್ರಶಸ್ತಿಯನ್ನು, ಬೆಂಗಳೂರು ಎಎಸ್‌ಸಿ ತಂಡದ ಸುನಿಲ್‌ ಉತ್ತಮ ಕ್ಯಾಚರ್‌ ಹಾಗೂ ಭೂಮಿಕಾ ತಂಡದ ಶಾಸಪ್ಪ ಕುಬಕಡ್ಡಿ ಟೂರ್ನಿಯ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry