ಗುರುವಾರ , ಜನವರಿ 23, 2020
27 °C

ಕಬಡ್ಡಿ: ವಿದ್ಯಾಭಾರತಿ ತಂಡದ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ವಿದ್ಯಾಭಾರತಿ ತಂಡಗಳು ಸೋಮವಾರ ನಗರದ ಪೊಲೀಸ್ ವಸತಿ ಶಾಲಾ ಕ್ರೀಡಾಂಗಣದಲ್ಲಿ ಆರಂಭವಾದ 57ನೇ ರಾಷ್ಟ್ರೀಯ 17 ವರ್ಷದೊಳಗಿನವರ ಶಾಲಾ ಕಬಡ್ಡಿ ಟೂರ್ನಿಯಲ್ಲಿ ಬಾಲಕ-ಬಾಲಕಿಯರ ವಿಭಾಗಗಳಲ್ಲಿ ಮೊದಲ ಸುತ್ತಿನ ಪಂದ್ಯಗಳನ್ನು ಜಯಿಸುವ ಮೂಲಕ ಶುಭಾರಂಭ ಮಾಡಿದವು.ಬಾಲಕರ ವಿಭಾಗದಲ್ಲಿ ವಿದ್ಯಾಭಾರತಿ ತಂಡ 35-33 (27-14)ರಿಂದ ಕೇರಳ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.ವಿರಾಮದ ವೇಳೆಯಲ್ಲಿ 14-27ರಿಂದ ಹಿಂದಿದ್ದ ಕೇರಳ ತಂಡ, ಉತ್ತರಾರ್ಧದ ಆಟದಲ್ಲಿ ತಿರುಗಿ ಬಿದ್ದಿತಾದರೂ ಅದರ ಹೋರಾಟ ಗೆಲುವಿಗೆ ಸಾಕಾಗಲಿಲ್ಲ.ಬಾಲಕಿಯರ ವಿಭಾಗದ ಪಂದ್ಯದಲ್ಲಿ ವಿದ್ಯಾಭಾರತಿ ತಂಡ 43-31 ಉತ್ತರಖಂಡ ತಂಡವನ್ನು ಪರಾಭವಗೊಳಿಸಿತು. ವಿರಾಮದ ವೇಳೆಗೆ ವಿದ್ಯಾಭಾರತಿ ತಂಡ 26-14 ಪಾಯಿಂಟ್‌ಗಳಿಂದ ಮುಂದಿತ್ತು.

ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ತಮಿಳುನಾಡು ತಂಡ 45-13 (21-3)ರಿಂದ ಉತ್ತರಖಂಡ ತಂಡದ ಮೇಲೂ; ಮಹಾರಾಷ್ಟ್ರ ತಂಡ 11-9 (7-6)ರಿಂದ ಮಧ್ಯ ಪ್ರದೇಶ ತಂಡದ ವಿರುದ್ಧವೂ; ಹರಿಯಾಣ   ತಂಡ 51-14 (19-9)ರಿಂದ ಚಂಡಿಗಡ ತಂಡದ ಮೇಲೂ ಜಯ ಸಾಧಿಸಿದವು.ಬಾಲಕಿಯರ ವಿಭಾಗದಲ್ಲಿ ಕೇರಳ ತಂಡ 27-19 (14-12)ರಿಂದ ಚಂಡಿಗಡ ತಂಡವನ್ನು; ಪಂಜಾಬ್ ತಂಡ 34-7 (21-1)ರಿಂದ ಬಿಹಾರ ತಂಡವನ್ನು; ಹರಿಯಾಣ ತಂಡ 26-9 (13-4)ರಿಂದ ಒಡಿಶಾ ತಂಡವನ್ನು ಪರಾಭವಗೊಳಿಸಿದವು.

ಪ್ರತಿಕ್ರಿಯಿಸಿ (+)