ಗುರುವಾರ , ಜೂನ್ 24, 2021
27 °C

ಕಬಡ್ಡಿ: ಸೆಮಿಫೈನಲ್‌ಗೆ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಬಡ್ಡಿ: ಸೆಮಿಫೈನಲ್‌ಗೆ ಭಾರತ

ಪಾಟ್ನಾ (ಪಿಟಿಐ): ಆತಿಥೇಯ ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಚೊಚ್ಚಲ ವಿಶ್ವಕಪ್ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.ಶನಿವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತ ಆರಂಭಿಕ ಪ್ರಭುತ್ವ ಸಾಧಿಸಿ 65-20ಪಾಯಿಂಟ್‌ಗಳಿಂದ ಇಂಡೋನೇಷ್ಯಾ ತಂಡವನ್ನು ಮಣಿಸಿ ಪ್ರಶಸ್ತಿ ಸನಿಹ ಹೆಜ್ಜೆ ಹಾಕಿದೆ. ಜಪಾನ್, ಥಾಯ್ಲೆಂಡ್ ಹಾಗೂ ಇರಾನ್ ತಂಡಗಳು ಸಹ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿವೆ.ಭಾನುವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ಎದುರು ಭಾರತ ಸೆಣಸಲಿದೆ.

ಪ್ರಬಲ ಹೋರಾಟ ಕಂಡು ಬಂದ ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ಜಪಾನ್ 17-15 ಪಾಯಿಂಟ್‌ಗಳಿಂದ ಬಾಂಗ್ಲದೇಶ ತಂಡವನ್ನು ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಥಾಯ್ಲೆಂಡ್ 30-08ರಲ್ಲಿ ಶ್ರೀಲಂಕಾ ತಂಡವನ್ನು ನಿರಾಯಾಸವಾಗಿ ಸೋಲಿಸಿ ನಾಲ್ಕರ ಘಟ್ಟ ಪ್ರವೇಶಿಸಿತು. ಇರಾನ್ 40-16ರಲ್ಲಿ ಕೊರಿಯಾ ಎದುರು ಸುಲಭ ಗೆಲುವು ಪಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.