ಕಬಿನಿ ಕಾಟನ್ ಕಮಾಲ್ ಎಥಿಕಸ್

7

ಕಬಿನಿ ಕಾಟನ್ ಕಮಾಲ್ ಎಥಿಕಸ್

Published:
Updated:
ಕಬಿನಿ ಕಾಟನ್ ಕಮಾಲ್ ಎಥಿಕಸ್

ಬಿಳಿ ಶುಭ್ರ ಹತ್ತಿ ಹೂ, ಕಂದು ಹಸಿರು ಮಿಶ್ರಿತ ಹೊಲದಲ್ಲಿ ಅರಳಿ ನಿಂತರೆ ರಸ್ತೆ ಬದಿಯ ಚೆಲುವಿಗೆ ಮನ ಸೋಲುತ್ತದೆ.ಹತ್ತಿ ಹೂ ಹಿಂಜಿ, ಅರಳೆ ಮಾಡಿ, ನೂಲೆಳೆದು, ನೈಸರ್ಗಿಕ ಬಣ್ಣ ಹಾಕಿ, ಕೈ ಮಗ್ಗದಲ್ಲಿ ನೇಯ್ದರೆ...?ಆ ಹತ್ತಿ ಬೆಳೆಗೆ ಯಾವುದೇ ರಾಸಾಯನಿಕಗಳನ್ನು ಬಳಸದೆ, ಜೈವಿಕ ಗೊಬ್ಬರಗಳನ್ನೇ ಹಾಕಿ, ಪರಿಪೂರ್ಣ ಶುದ್ಧ `ಹತ್ತಿ~ ಬೆಳೆಯಬೇಕು. ಇದಕ್ಕೆ ಕಬಿನಿ ದಡದ ರೈತರಿಗೆ ತರಬೇತಿ ನೀಡಲಾಗಿದೆ. ಅಂತರರಾಷ್ಟ್ರೀಯ ಗುಣಮಟ್ಟದ ನೈಸರ್ಗಿಕ ಬಣ್ಣಗಳನ್ನು ತಯಾರಿಸಲೂ ತರಬೇತಿ ನೀಡಲಾಗಿದೆ. ಕೈಮಗ್ಗದಲ್ಲಿಯೂ ನಾಜೂಕಿನಿಂದ ನೇಯುವ ನೇಕಾರರು ಇಲ್ಲಿದ್ದಾರೆ. ಇವರೆಲ್ಲರ ಸಾಮೂಹಿಕ ಶ್ರಮದ ಫಲಿತಾಂಶವೇ `ಎಥಿಕಸ್~.ಜಾಗತಿಕ ಜವಳಿ ಉದ್ಯಮದಲ್ಲಿ ತನ್ನದೇ ಹೆಜ್ಜೆ ಗುರುತು ಮೂಡಿಸಿರುವ ಬ್ರ್ಯಾಂಡ್ ಇದು. ಭಾರತೀಯ ನೇಯ್ಗೆಯ ಪರಂಪರೆಯಲ್ಲಿ ಅಪ್ಪಟ ತಾಜಾತನ ಹಾಗೂ ಸಮಕಾಲೀನ ಸ್ಪರ್ಶ ನೀಡುತ್ತ ಈ ಬ್ರಾಂಡ್ ಜವಳಿ ಉದ್ಯಮವನ್ನು ಪ್ರವೇಶಿಸಿತು.ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಲಿನನ್, ಸೀರೆ, ಸ್ಟೋಲ್ ಹಾಗೂ ಕುರ್ತಿಸ್‌ಗಳನ್ನೂ, ಕುರ್ತಾಗಳನ್ನೂ ಸಿದ್ಧಪಡಿಸುತ್ತದೆ.ಶತಪ್ರತಿಶತ ಇಕೊಲಾಜಿಕಲ್ ಆರ್ಗ್ಯಾನಿಕ್ ಕಾಟನ್ ಮತ್ತು ಸಿಲ್ಕ್‌ನಿಂದಲೇ ಉಡುಪು, ಸೀರೆಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ಎಥಿಕಸ್ ಹೇಳಿಕೊಳ್ಳುತ್ತದೆ.ರೇಷ್ಮೆಯನ್ನು ಬೇರ್ಪಡಿಸುವ ವಿಧಾನವೂ ವಿಶೇಷವಾಗಿದ್ದು, ಇದಕ್ಕೆ `ಅಹಿಂಸಾ ಸಿಲ್ಕ್~ ಎಂದು ಹೆಸರಿಡಲಾಗಿದೆ. ಗ್ರಾಮೀಣ ನೇಕಾರರು ಈ ಸೀರೆ, ಸ್ಟೋಲ್‌ಗಳನ್ನು ನೇಯುತ್ತಾರೆ. ರಾಷ್ಟ್ರೀಯ ವಸ್ತ್ರ ವಿನ್ಯಾಸ ಸಂಸ್ಥೆ (ನಿಫ್ಟ್)ಯ ವಿದ್ಯಾರ್ಥಿಗಳು ಸೀರೆ, ಉಡುಪುಗಳನ್ನು ವಿನ್ಯಾಸಗೊಳಿಸಿರುತ್ತಾರೆ.ತಳಮಟ್ಟದ ರೈತರು, ನೇಕಾರರು, ವಿದ್ಯಾರ್ಥಿಗಳು, ಕುಶಲ ಕಲಾವಿದರು ಹೀಗೆ ಗ್ರಾಮೀಣ ಮಟ್ಟದ ಶ್ರಮವನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಲಾಗುತ್ತಿದೆ. ಲಾಭಾಂಶ ಎಲ್ಲರಿಗೂ ಸಮವಾಗಿ ತಲುಪುತ್ತದೆ.`ಎಥಿಕಸ್~ನ ನೂತನ ಶ್ರೇಣಿಯ ಉತ್ಪನ್ನಗಳನ್ನು ಇದೇ 27ರಿಂದ 29ರವರೆಗೆ ಮಾರಾಟ ಮತ್ತು ಪ್ರದರ್ಶನವನ್ನು ಏರ್ಪಡಿಸಿದೆ.ಬೆಲೆ 4000 ರೂಪಾಯಿಗಳಿಂದ 7 ಸಾವಿರ ರೂಪಾಯಿಗಳವರೆಗಿನ ಶ್ರೇಣಿಯಲ್ಲಿ ಲಭ್ಯ ಇವೆ.ವಿಳಾಸ: `ಸೆರೆನಿಟಿ~, ನಂ8/1, 5ನೇ ಅಡ್ಡರಸ್ತೆ, ಜಯಮಹಲ್ ಎಕ್ಸ್‌ಟೆನ್‌ಶನ್. ಇಲ್ಲಿ ಪ್ರತಿದಿನ ಬೆಳಗಿನ 11ರಿಂದ ಸಂಜೆಯ 7ರವರೆಗೆ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ. ಮಾಹಿತಿಗೆ: 080 41279127/ 094486 48576 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry