ಸೋಮವಾರ, ಜೂನ್ 21, 2021
29 °C

ಕಬ್ಬನ್‌ ಉದ್ಯಾನದಲ್ಲಿ ಬರಲಿದೆ ಜಿಮ್ನಾಸಿಯಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ವಾಯು ವಿಹಾರ ನಡೆಸುವವರಿಗೆ ಇಲ್ಲಿದೆ ಸಂತಸದ ಸುದ್ದಿ. ಉದ್ಯಾನದಲ್ಲಿ ಶೀಘ್ರವೇ ವ್ಯಾಯಾಮ ಸಲಕರಣೆಗಳ (ಜಿಮ್ನಾಸಿಯಂ) ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.ಕಬ್ಬನ್‌ ಉದ್ಯಾನದ ವಾಯು ವಿಹಾರಿಗಳ ಸಂಘದ ಪದಾಧಿ­ಕಾರಿ­ಗಳು ಈ ಸಂಬಂಧ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ರಿಯಲ್‌ ಎಸ್ಟೇಟ್‌ ಸಂಸ್ಥೆ ಆರ್‌ಎಂಜೆಡ್‌ ಕಾರ್ಪ್‌ನ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ. ವ್ಯಾಯಾಮ ಸಲಕರಣೆಗಳ ಪ್ರಾಯೋಜಕತ್ವ ವಹಿಸಿಕೊಳ್ಳಲು ಆರ್‌ಎಂಜೆಡ್‌ ಸಂಸ್ಥೆ ಒಪ್ಪಿಕೊಂಡಿದೆ. ಈ ಸಲಕರಣೆಗಳನ್ನು ಟರ್ಕಿಯಿಂದ ಆಮದು ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.‘ಸ್ಯಾಂಕಿ ಕೆರೆಗೆ ಇತ್ತೀಚೆಗೆ ಭೇಟಿ ನೀಡಿದ್ದೆವು. ಅಲ್ಲಿ ವ್ಯವಸ್ಥೆ ಮಾಡಲಾದ ವ್ಯಾಯಾಮದ ಸಲಕರಣೆಗಳನ್ನು ವೀಕ್ಷಿಸಿದ ನಾವು, ಅಂತಹದ್ದೇ ಸೌಲಭ್ಯವನ್ನು ಕಬ್ಬನ್‌ ಉದ್ಯಾನದಲ್ಲೂ ಒದಗಿಸಲು ನಿರ್ಧರಿಸಿದೆವು’ ಎಂದು ವಾಯು ವಿಹಾರಿಗಳ ಸಂಘದ ಪದಾಧಿಕಾರಿಗಳು ಹೇಳುತ್ತಾರೆ.‘ಸುಮಾರು 3,00 ಎಕರೆ ಪ್ರದೇಶದಲ್ಲಿ ಮೈಚಾಚಿ­ಕೊಂಡಿ­ರುವ ಕಬ್ಬನ್‌ ಉದ್ಯಾನದಲ್ಲಿ ನಿತ್ಯ 4 ಸಾವಿರದಿಂದ 5 ಸಾವಿರ ಜನ ನಿತ್ಯ ವಾಯು ವಿಹಾರ ನಡೆಸುತ್ತಾರೆ. ಅವರಿಗೆ ಈ ಸೌಲಭ್ಯದಿಂದ ಪ್ರಯೋಜನ ಆಗಲಿದೆ. ಕೇಂದ್ರ ಗ್ರಂಥಾಲಯ ಕಟ್ಟಡದ ಹತ್ತಿರವಿರುವ ಖಾಲಿ ಜಾಗದಲ್ಲಿ ವ್ಯಾಯಾಮ ಸಲಕರಣೆಗಳ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ಆದರೆ, ಸ್ಥಳದ ವಿಷಯವಾಗಿ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ’ ಎಂದು ಅವರು ತಿಳಿಸುತ್ತಾರೆ.ಆರ್‌ಎಂಜೆಡ್‌ ಸಂಸ್ಥೆ ಈಗಾಗಲೇ ಹಲಸೂರು ಕೆರೆ, ಸ್ಯಾಂಕಿ ಕೆರೆ, ಸದಾಶಿವನಗರ ಉದ್ಯಾನ, ಕೋರಮಂಗಲ 5ನೇ ಬ್ಲಾಕ್‌ ಮತ್ತು ಎಂ.ಎನ್‌.ಕೃಷ್ಣರಾವ್‌ ಉದ್ಯಾನಗಳಲ್ಲಿ ವ್ಯಾಯಾಮ ಸಲಕರಣೆಗಳ ಸೌಲಭ್ಯ ಒದಗಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.