ಗುರುವಾರ , ಮೇ 19, 2022
23 °C

ಕಬ್ಬಾಳಮ್ಮ ದೇವಿ ಬ್ರಹ್ಮ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜರಾಜೇಶ್ವರಿ ನಗರ: ಇಲ್ಲಿನ ಪ್ರಸಿದ್ಧ ಕಬ್ಬಾಳಮ್ಮ ದೇವಿಯ ಪ್ರಥಮ ಬ್ರಹ್ಮ ರಥೋತ್ಸವಕ್ಕೆ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮಿ ಅವರು ಚಾಲನೆ ನೀಡಿದರು. ಜೈಕಾರ ಹಾಕುತ್ತ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಉತ್ತರಹಳ್ಳಿ ಸಮೀಪದ ಅರೇಹಳ್ಳಿಯ ಹನುಮಗಿರಿಯ ತಪೋವನ ಕ್ಷೇತ್ರ ದೇವಸ್ಥಾನಗಳ ಅಭಿವೃದ್ದಿ ಸೇವಾ ಸಮಿತಿಯು ನೂತನವಾಗಿ ನಿರ್ಮಿಸಿರುವ ರಥದಲ್ಲಿ ಕಬ್ಬಾಳಮ್ಮ ದೇವಿಯ ಮೂರ್ತಿಯನ್ನು ಕೂರಿಸಿ ವಿಶೇಷ ಪೂಜೆ ಪುರಸ್ಕಾರಗಳೊಂದಿಗೆ ರಥೋತ್ಸವವನ್ನು ನಡೆಸಲಾಯಿತು.ಶಾಸಕ ಎಂ.ಕೃಷ್ಣಪ್ಪ, ಪಾಲಿಕೆ ಸದಸ್ಯ ರಮೇಶ್‌ರಾಜು, ದೇವಸ್ಥಾನಗಳ ಅಭಿವೃದ್ದಿ ಸಮಿತಿ ಅಧ್ಯಕ್ಷ ವಿ.ಆಂಜನಪ್ಪ, ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು, ಅರೇಹಳ್ಳಿ ಹಿರಿಯರು ಹಾಜರಿದ್ದರು. ಕಂಸಾಳೆ ಪದ, ಗೊರವನ ಕುಣಿತ, ಪೂಜಾ ಕುಣಿತ, ಪಟ್ಟದ ಕುಣಿತ, ವೀರಗಾಸೆ, ವೀರಭದ್ರನ ಕುಣಿತ, ಸೇರಿದಂತೆ ವಿವಿಧ ಜಾನಪದ ಕಲೆಗಳ ಪ್ರದರ್ಶನಗಳು ಜರುಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.