ಕಬ್ಬು ಖರೀದಿಸಲು ನಿರ್ಲಕ್ಷ್ಯ: ಆಕ್ರೋಶ

7

ಕಬ್ಬು ಖರೀದಿಸಲು ನಿರ್ಲಕ್ಷ್ಯ: ಆಕ್ರೋಶ

Published:
Updated:

ಆಳಂದ: ಸ್ಥಳೀಯ ರೈತರ ಕಬ್ಬು ನಿರ್ಲಕ್ಷಿಸಿ ಮಹಾರಾಷ್ಟ್ರದಿಂದ ಆಮದು ಮಾಡಿಕೊಳ್ಳುತ್ತಿರುವ ಕಬ್ಬು ತುಂಬಿದ ಲಾರಿಗಳನ್ನು ಸ್ವತಃ ರೈತರೆ ಮುಂದಾಗಿ ತಡೆಯೊಡ್ಡಿದ ಘಟನೆ ನಡೆದಿದೆ.ಮಂಗಳವಾರ ಮಹಾರಾಷ್ಟ್ರದಿಂದ ತಾಲ್ಲೂಕಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಹೊತ್ತು ತರಲಾಗುತ್ತಿದ್ದ ಕಬ್ಬಿನ ಲಾರಿಗಳನ್ನು ಸಂಜೆ ಪಟ್ಟಣದ ಚೆಕ್ ಪೋಸ್ಟ್ ಬಳಿ ತಡೆ ಹಿಡಿದು ಆಕ್ರೋಶ ವ್ಯಕ್ತಪಡಿಸಿ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿದರು.ಆಕ್ಮಸಿಕವಾಗಿ ಬುಧವಾರ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳಿಗೆ ಈ ಕುರಿತು ರೈತ ಮುಖಂಡರು ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಘಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ವಿಧಾನ ಪರಿಷತ ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ, ಆಳಂದ, ಅಫಜಲಪುರ್ ಮತ್ತು ಗುಲ್ಬರ್ಗ ವ್ತಾಪ್ತಿಯ 25 ಸಾವಿರ ಎಕರೆ ಕಬ್ಬಿದೆ. ಒಟ್ಟು 6.60ಲಕ್ಷ ಟನ್ ಕಬ್ಬು ಆಳಂದ ಮತ್ತು ಗುಲ್ಬರ್ಗ ತಾಲ್ಲೂಕಿನಲ್ಲೇ ಬೆಳೆದು ನಿಂತಿದೆ. ಕಾರ್ಖಾನೆ ಸತತ 5 ತಿಂಗಳ ಕಾಲ ಕಬ್ಬು ಅರೆದರು 2.25ಲಕ್ಷ ಟನ್ ಅರಿಯಬಹುದು. ಇನ್ನೂ 1.35 ಲಕ್ಷ ಟನ್ ಕಬ್ಬು ಬಾಕಿ ಉಳಿಯುತ್ತಿದೆ. ಇಂತಹದ್ದರಲ್ಲೇ ಸ್ಥಳೀಯ ರೈತರ ಕಬ್ಬು ಪಡೆಯುತ್ತಿಲ್ಲ ಹೀಗಾಗಿ ರೈತರ ಗೊಳು ಶುರವಾಗಿದೆ ಎಂದು ಆರೋಪಿಸಿದರು.ಕಾರ್ಖಾನೆ ಆಡಳಿತ ಮಂಡಳಿ ಸಂಪೂರ್ಣವಾಗಿ ಹದಗೆಟ್ಟಿದೆ. ಕಬ್ಬು ಕಟಾವಿಗೆ ಬರುವ ಕಾರ್ಮಿಕರಿಗೆ ಎಕರೆಗೆ 2 ಸಾವಿರ ರೂಪಾಯಿ ಲಂಚ ಕೊಡಬೇಕು. ಲಾರಿ ಚಾಲಕರಿಗೆ 500 ರೂಪಾಯಿ ಅಲ್ಲದೆ, ಕುರಿ, ಕೋಳಿ ಬಾಡೂಟ ಕೊಡಬೇಕಾಗಿದೆ. ಇಷ್ಟೆಲ್ಲ ಇಲ್ಲಿಯ ರೈತರಿಗೆ ಒತ್ತಡವಿದ್ದಾಗಲೂ ಪ್ರತಿದಿನ ಸುಮಾರು 30 ಲಾರಿಗಳಷ್ಟು ಮಹಾರಾಷ್ಟ್ರದಿಂದ ಕಬ್ಬು ತರಿಸಿಕೊಳ್ಳುವುದು ಅಗತ್ಯವಿದೆ ಎಂದು ಪಾಟೀಲ ಖಾರವಾಗಿ ಪ್ರಶ್ನಿಸಿದರು.ಮಂಗಳವಾರ ನಾಲ್ಕು ಕಬ್ಬು ತುಂಬಿದ ಮಹಾರಾಷ್ಟ್ರದ ಲಾರಿಗಳನ್ನು ಚೆಕ್ ಪೋಸ್ಟ್ ಬಳಿ ರೈತರೇ ನಿಲ್ಲಿಸಿದ್ದಾರೆ. ಕಾರ್ಖಾನೆಗೆ ಗುತ್ತಿಗೆ ಪಡೆದ ಎನ್‌ಎಸ್‌ಎಲ್ ಶುಗರ್ಸ್‌ ಲಿಮಿಟೆಡ್ ಕಂಪನಿಯವರು, ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು ಸ್ವತಃ ಅವರೇ ಕಾನೂನು ಉಲ್ಲಂಘಿಸಿ ಹೊರಗಿನಿಂದ ಕಬ್ಬು ತರಿಸಿಕೊಳ್ಳುತ್ತಿರುವುದು ನಮ್ಮ ರೈತರ ಹಿತಾಶಕ್ತಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು.ಕಾರ್ಖಾನೆ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಸ್ಥಿಕೆ ವಹಿಸಿ  ಕಾನೂನು ಕ್ರಮ ಜರುಗಿಸಬೇಕು. ನಮ್ಮ ರೈತರ ಕಬ್ಬು ಸಂಪೂರ್ಣವಾಗಿ ಅರೆಯುವ ತನಕ ಕಾರ್ಖಾನೆ ನಡೆಸಬೇಕು. ಹದಗೆಟ್ಟುಹೋದ ಕಾರ್ಖಾನೆ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.ರೈತರಾದ ಬಸವರಾಜ ಚೌಲ, ಶಿವುಗೌಡ ಕೊರಳ್ಳಿ, ಜಾಕೀರ ಅಲಿ, ಲಾಯಕಲಿ ಪಟೇಲ್, ಸಿದ್ದುಗೌಡ ಗೊಳ್ಳೊಳಿ, ಭೀಮಶಾ ನಂದಗಾಂವ್, ರಮೇಶ ಉಡಗಿ, ಶರಣಬಸಪ್ಪ ಅಂಬಾಜಿ, ವೀರಣ್ಣಾ ಕಾಚಾಪುರ, ಶಿವಾನಂದ ಬರಮಣೆ, ಕಾಶಿಂಸಾಬ ಗುತ್ತೇದಾರ ಅನೇಕರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry