ಕಬ್ಬು ಬೆಲೆ ಶೇ 17ರಷ್ಟು ಏರಿಕೆ

7

ಕಬ್ಬು ಬೆಲೆ ಶೇ 17ರಷ್ಟು ಏರಿಕೆ

Published:
Updated:
ಕಬ್ಬು ಬೆಲೆ ಶೇ 17ರಷ್ಟು ಏರಿಕೆ

ನವದೆಹಲಿ(ಪಿಟಿಐ): ಕಬ್ಬಿನ ಬೆಲೆಯಲ್ಲಿ ಶೇ 17ರಷ್ಟು ಏರಿಕೆ ಮಾಡುವಂತೆ `ಕೃಷಿ ವೆಚ್ಚ ಮತ್ತು ಬೆಲೆ ಆಯೋಗ~(ಸಿಇಸಿಪಿ) ಕೇಂದ್ರ ಸರ್ಕಾರಕ್ಕೆ ಸೋಮವಾರ ಶಿಫಾರಸು ಮಾಡಿದೆ.

ಉತ್ಪಾದನೆ ವೆಚ್ಚ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕಬ್ಬಿಗೆ ನಿಗದಿಪಡಿಸುವ `ನ್ಯಾಯಯುತ ಹಾಗೂ ತಕ್ಕ ಪ್ರತಿಫಲ ಬೆಲೆ~ಯನ್ನು(ಎಫ್‌ಆರ್‌ಪಿ) ಶೇ. 17ರಷ್ಟು ಏರಿಸಬೇಕು. ಅಂದರೆ `2012-13ನೇ ಮಾರಾಟದ ವರ್ಷ~ದಲ್ಲಿ(ಅಕ್ಟೋಬರ್-ಸೆಪ್ಟೆಂಬರ್ ಅವಧಿ) ಟನ್ ಕಬ್ಬಿಗೆ ರೂ 1700 ಕನಿಷ್ಠ ಎಫ್‌ಎಆರ್ ಬೆಲೆ ಎಂದು ನಿಗದಿಪಡಿಸಬೇಕು ಎಂದು ಆಯೋಗ ಶಿಫಾರಸು ವರದಿಯಲ್ಲಿ ಹೇಳಿದೆ.

ಸಿಎಸಿಪಿ ಒಂದು ಶಾಸನಾತ್ಮಕ ಸಂಸ್ಥೆಯಾಗಿದ್ದು, ಪ್ರತಿವರ್ಷ `ಎಫ್‌ಆರ್‌ಪಿ~ ನಿಗದಿ ಕುರಿತು ರೈತ ಪ್ರತಿನಿಧಿಗಳು ಮತ್ತು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಸಭೆ ನಡೆಸಿ ಸರ್ಕಾರಕ್ಕೆ ಶಿಫಾರಸು ವರದಿ ಸಲ್ಲಿಸುತ್ತದೆ. 2011-12ರಲ್ಲಿ ಟನ್ ಕಬ್ಬಿಗೆ ರೂ. 1450 ಎಫ್‌ಆರ್‌ಪಿ  ನಿಗದಿಗೆ ಸಿಎಸಿಪಿ ಶಿಫಾರಸು ಮಾಡಿತ್ತು. ಈ ವರ್ಷ ಉತ್ಪಾದನೆ, ಕಟಾವು ಕೂಲಿ ಮತ್ತು ಸಾಗಣೆ ವೆಚ್ಚ ಎಲ್ಲವೂ ಹೆಚ್ಚಾಗಿರುವುದನ್ನು ಗಮನದಲ್ಲಿಟ್ಟುಕೊಂಡು ರೂ 250ರಷ್ಟು ಏರಿಕೆ ಮಾಡಿ ಶಿಫಾರಸು ಸಲ್ಲಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳನ್ನು ಹೊರತುಪಡಿಸಿ ದೇಶದ ಬಹುತೇಕ ಕಬ್ಬು ಬೆಳೆಯುವ ರಾಜ್ಯಗಳು ಈ ಎಫ್‌ಆರ್‌ಪಿ ಪದ್ಧತಿಯನ್ನೇ ಅನುಸರಿಸುತ್ತಿವೆ. 2009-10ರ ಮಾರಾಟ ವರ್ಷದಿಂದಲೇ ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿಗದಿ ಪದ್ಧತಿ ಅರಂಭಿಸಿದೆ. ಅದಕ್ಕೂ ಮುನ್ನ `ಶಾಸನಾತ್ಮಕ ಕನಿಷ್ಠ ಬೆಲೆ(ಎಸ್‌ಎಂಪಿ) ಪದ್ಧತಿ ಜಾರಿಯಲ್ಲಿದ್ದಿತು.ಕಬ್ಬಿನಲ್ಲಿ ಕನಿಷ್ಠ ಶೇ 9.5ರಷ್ಟು ಸಕ್ಕರೆ ಇಳುವರಿ ಬರುವುದನ್ನು ನಿರೀಕ್ಷೆಯಲ್ಲಿಟ್ಟುಕೊಂಡು ಎಫ್‌ಆರ್‌ಪಿ ನಿಗದಿಪಡಿಸಲಾಗುತ್ತದೆ. ಈಗ ನಿಗದಿಪಡಿಸಿರುವ ರೂ 1700 ಬೆಲೆಯೂ ಶೇ 9.5ರಷ್ಟು ಸಕ್ಕರೆ ಇಳುವರಿ ನೀಡುವ ಟನ್ ಕಬ್ಬಿಗೆ ಸಂಬಂಧಿಸಿದೆ. ನಂತರ ಪ್ರತಿ ಶೇ 0.1ರಷ್ಟು ಹೆಚ್ಚುವರಿ ಸಕ್ಕರೆ ಇಳುವರಿಗೂ ರೂ 1.46ರಷ್ಟು ಅಧಿಕ ಬೆಲೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.2011-12ರಲ್ಲಿ ದೇಶದಲ್ಲಿ ಒಟ್ಟು 351.19 ಲಕ್ಷ ಟನ್ ಕಬ್ಬು ಉತ್ಪಾದನೆ ಅಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry