ಕಬ್ಬು: ಮುಂಗಡ ಹಣ ನಿಗದಿಗೆ ಒತ್ತಾಯ

7

ಕಬ್ಬು: ಮುಂಗಡ ಹಣ ನಿಗದಿಗೆ ಒತ್ತಾಯ

Published:
Updated:

ಮಂಡ್ಯ: ದ್ವಿಚಕ್ರ ವಾಹನಗಳ ಸವಾರರು ಡರ್ಟ್ ಟ್ರ್ಯಾಕ್‌ನಲ್ಲಿ ಪೈಪೋಟಿಗೆ ಬಿದ್ದು ವಾಹನ ಓಡಿಸುತ್ತಿದ್ದರೆ, ನೆರೆದಿದ್ದ ಜನರು ಉಸಿರು ಬಿಗಿ ಹಿಡಿದು ನೋಡುತ್ತಿದ್ದರು.ಎಚ್‌ಕೆಜಿಎನ್ ಮೋಟಾರ್ ರೇಸಿಂಗ್ ವತಿಯಿಂದ ತಾಲ್ಲೂಕಿನ ಯಲಿಯೂರು ಗ್ರಾಮದ ಹೊರವಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಾಹನಗಳು ಹೊಗೆಯುಗುಳುತ್ತಾ, ಅಗಾಧ ಶಬ್ಧ ಮಾಡುತ್ತಾ ಹೋಗುತ್ತಿದ್ದರು.ಕೇರಳ, ತಮಿಳುನಾಡು, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಭಾಗವಹಿಸಿದ್ದ 80ಕ್ಕೂ ಹೆಚ್ಚು ಸ್ಪರ್ಧಿಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿದ್ದರು.8 ವಿಭಾಗಗಳಲ್ಲಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ತುರುಸಿನ ಪೈಪೋಟಿ ನಡೆಯಿತು. ಕೆಲವು ವಾಹನ ಸವಾರರು ಬಿದ್ದರೂ, ಕೂಡಲೇ ಮತ್ತೆ ಎದ್ದು ವಾಹನ ತೆಗೆದುಕೊಂಡು ರೇಸ್‌ನಲ್ಲಿ ಭಾಗವಹಿಸುತ್ತಿದ್ದರು.ತೀವ್ರ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯನ್ನು ವೀಕ್ಷಿಸಲು ಯಲಿಯೂರು ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮದ ನೂರಾರು ಜನರು ಸೇರಿದ್ದರು. ಮುಕಮಿಲ್ ಪಾಷಾ, ಮಹ್ಮದ್ ಅಲಿ, ಮುದಸಿರ್‌ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry