ಗುರುವಾರ , ಮೇ 19, 2022
20 °C

ಕಮಲಾವತಿ ಸೇತುವೆ ಕಾಮಗಾರಿ: ಹಾಸುಗಲ್ಲಿಗೆ ಗಂಟುಬಿದ್ದ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ: ತಾಲ್ಲೂಕಿನ ರಂಜೋಳ-ಸಿಂಧನ ಮಡು ಗ್ರಾಮಗಳ ಮಧ್ಯೆ ಹರಿಯುವ ಕಮಲಾವತಿ ನದಿಗೆ ಅಡ್ಡವಾಗಿ ಕಟ್ಟುತ್ತಿರುವ  ಸೇತುವೆಗಾಗಿ ಭಾರಿ ಗಾತ್ರದ ಸಿಮೆಂಟ್ ಕಂಬಗಳನ್ನು ನಿಲ್ಲಿಸಲು ಆಳವಾಗಿ ನದಿ ಪಾತ್ರದಲ್ಲಿ ಮತ್ತು ದಡದಲ್ಲಿ ಗುಂಡಿ ತೋಡುವಾಗ ಫರಸಿ ಕಲ್ಲುಗಳು ಕಾಣಿಸಿಕೊಂಡು ಗುತ್ತಿಗೆದಾರನ ಕೆಲಸ ಹಗುರ ಮಾಡಿದ, ಸುತ್ತಮುತ್ತಲ ಗ್ರಾಮಸ್ಥರಿಗೆ ಪುಕ್ಕಟೆ ಫರಸಿಕಲ್ಲುಗಳು ಲಭ್ಯವಾದ ಅಪರೂಪದ ಪ್ರಕರಣ ವರದಿಯಾಗಿದೆ.ಈ ಸೇತುವೆಯ ಕಾಮಗಾರಿಯ ಗುತ್ತಿಗೆದಾರನಿಗೆ ನದಿ ಪಾತ್ರದಲ್ಲಿ ಫರಿಸಿಕಲ್ಲುಗಳು ಗೋಚರಿಸಿದ್ದ ಈ ಪ್ರಕರಣ, ಗುತ್ತಿಗೆದಾರನಿಗೆ, ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮತ್ತು ಸಮೀಪದ ಗ್ರಾಮಸ್ಥರಿಗೆ ಶುಕ್ರದೆಸೆ ತಂದಿದೆಗ್ರಾಮಸ್ಥರು ಬಂದು ಫರಸಿ ಕಲ್ಲುಗಳನ್ನು ತಾವೇ ಎತ್ತಿಕೊಂಡು ಸಾಗಿಸುತ್ತಿರುವುದು, ಸೇತುವೆ ಕಾಮಗಾರಿಯ ಗುತ್ತಿಗೆದಾರನ ಕೆಲಸವನ್ನು ಸ್ವಲ್ಪ ಹಗರು ಮಾಡಿದಂತಾಗಿದೆ. ಫರಸಿ ಕಲ್ಲಿಗಾಗಿ ಸರದಿಯಲ್ಲಿ ಬರುತ್ತಿರುವ ಗ್ರಾಮಸ್ಥರು ಕಾರ್ಮಿಕರಿಗೆ ಕೂಲಿಕೊಟ್ಟು ಅವನ್ನು ಅಗತ್ಯ ಗಾತ್ರದಲ್ಲಿ ಕತ್ತರಿಸಿಕೊಂಡು ಸಾಗಿಸುತ್ತಿದ್ದರೆ, ಕಾರ್ಮಿಕರಿಗೆ ಒಂದಿಷ್ಟು ದುಡ್ಡು ಗಿಟ್ಟುತ್ತಿದೆ.ಸಾಮಾನ್ಯವಾಗಿ ನೆಲದಲ್ಲಿನ ಫರಸಿ ಕಲ್ಲುಗಳನ್ನು ತಗೆದು ಮಾರಾಟ ಮಾಡಬೇಕಾದರೆ, ಸಾಗಿಸಬೇಕಾದರೆ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯಬೇಕು, ಅದಕ್ಕಾಗಿ ಶುಲ್ಕ ಪಾವತಿ ಮಾಡಬೇಕು. ಆದರೆ ಇಲ್ಲಿ ಅಂಥ ಯಾವ ಗೊಡವೆಯೂ ಇಲ್ಲ.ಸೇತುವೆ ಕಾಮಗಾರಿ ಸ್ಥಳದಲ್ಲಿ ಸಿಕ್ಕುತ್ತಿರುವ ಈ ಫರಸಿ ಕಲ್ಲಿನ ಸಾಗಾಟಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಇದು ಗ್ರಾಮಸ್ಥರನ್ನು ಇತ್ತ ಸೆಳೆಯುತ್ತಿದೆ. ಹಗಲು ರಾತ್ರಿ ಸರದಿಯಲ್ಲಿ ಗ್ರಾಮಸ್ಥರು ಬಂದು ಫರಸಿಕಲ್ಲುಗಳನ್ನು ಸಾಗಿಸುತ್ತಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.