ಕಮಲ್‌ ಕುಡಿ ಅಕ್ಷರ ಬಣ್ಣದ ಲೋಕಕ್ಕೆ...

7

ಕಮಲ್‌ ಕುಡಿ ಅಕ್ಷರ ಬಣ್ಣದ ಲೋಕಕ್ಕೆ...

Published:
Updated:
ಕಮಲ್‌ ಕುಡಿ ಅಕ್ಷರ ಬಣ್ಣದ ಲೋಕಕ್ಕೆ...

ಕೆಯನ್ನು ಮೊದಲ ಸಾರಿ ನೋಡಿದವರೆಲ್ಲಾ ನಟ ಕಮಲ ಹಾಸನ್‌ ಅವರಂತೆ ಇದ್ದಾಳಲ್ಲಾ ಎಂದು ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿ ವ್ಯಕ್ತಪಡಿಸಿದ್ದರು. ಅದಕ್ಕಿಂತ ಮಿಗಿಲಾಗಿ ಈಕೆಯ ಕ್ಯಾಟ್‌ ಐಸ್ (ಬೆಕ್ಕಿನ ಕಣ್ಣು) ತುಂಬಾ ಆಕರ್ಷಿಸುತ್ತಿದ್ದವು. ಅಂದಹಾಗೆ, ಈ ಹುಡುಗಿಯ ಹೆಸರು ಅಕ್ಷರ ಹಾಸನ್‌. ನಟ ಕಮಲ ಹಾಸನ್‌ ಅವರ ಮತ್ತೊಂದು ಕುಡಿ.ಅಕ್ಷರ ಹಾಸನ್‌ ಸಹ ಅಕ್ಕನ ಹಾದಿಯಲ್ಲೇ ನಡೆಯುವ ನಿರ್ಧಾರ ಮಾಡಿದ್ದಾರೆ. ಒಂದರ್ಥದಲ್ಲಿ ಅಕ್ಷರ ಚಿತ್ರಜೀವನಕ್ಕೆ ಕಾಲಿಡಲು ಅಕ್ಕನೇ ಕಾರಣವಂತೆ.

ಚಿತ್ರ ನಿರ್ಮಾಪಕ ಬಾಲ್ಕಿ ನಿರ್ಮಿಸಲಿರುವ ಹೊಸ ಚಿತ್ರವೊಂದಕ್ಕೆ ಅಕ್ಷರ ಬಣ್ಣ ಹಚ್ಚುವ ಮೂಲಕ ತಮ್ಮ ಚಿತ್ರಯಾನ ಆರಂಭಿಸಲಿದ್ದಾರೆ. ನಟನೆ ಮತ್ತು ಬಹುಮುಖಿ ಪ್ರತಿಭೆ ಆಕೆಯ ರಕ್ತದಲ್ಲೇ ಹರಿದುಬಂದಿದೆ. ಅಪ್ಪ ಕಮಲ ಹಾಸನ್‌ ದೊಡ್ಡನಟ.

ಅಪ್ಪನ ನೆರಳಿನಿಂದ ಹೊರಬಂದು  ಚಿತ್ರರಂಗದಲ್ಲಿ ಛಾಪು ಮೂಡಿಸುತ್ತಿರುವ ಶ್ರುತಿ ಹಾಸನ್‌ ಮತ್ತೊಂದೆಡೆ. ಅಕ್ಷರ ಬಣ್ಣದ ಲೋಕ ಪ್ರವೇಶಿಸಲು ಇಷ್ಟು ಸಾಕಲ್ಲವೇ? ಬಾಲ್ಕಿ ಅವರು ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ನಟಿಸಲಿರುವ ಅಕ್ಷರ ಅವರಿಗೆ ಮೊದಲ ಚಿತ್ರದಲ್ಲಿನ ಪಾತ್ರವೇ ನಟನೆಗೆ ಸವಾಲೊಡ್ಡಲಿದೆಯಂತೆ. ಈ ಚಿತ್ರದಲ್ಲಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಕೊಳ್ಳಲಿದ್ದಾರೆ ಎನ್ನುತ್ತಿವೆ ಮೂಲಗಳು.ಅಂದಹಾಗೆ, ಅಕ್ಷರ ಚಿತ್ರರಂಗಕ್ಕೆ ಕಾಲಿರಿಸಲು ಅಕ್ಕ ಶ್ರುತಿ ಹಾಸನ್‌ ಅವರ ಪಟ್ಟೂ ಕಾರಣವಂತೆ. ಹೊಸ ಚಿತ್ರದಲ್ಲಿ ತಂಗಿಯ ಪಾತ್ರಕ್ಕಿರುವ ಮಹತ್ವ ಕಂಡು ತುಂಬಾ ಥ್ರಿಲ್‌ ಆದ ಶ್ರುತಿ, ‘ನೀನು ಈ ಚಿತ್ರದಲ್ಲಿ ನಟಿಸಲೇ ಬೇಕು’ ಎಂದು ಒತ್ತಾಯಿಸಿದರಂತೆ. ಅಕ್ಕನ ಮಾತಿಗೆ ಕಟ್ಟುಬಿದ್ದು ಅಕ್ಷರ ಅವರು ನಟಿಸಲು ಒಪ್ಪಿಕೊಂಡರಂತೆ.ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡ ನಂತರ ಅಕ್ಕ ಶ್ರುತಿ ತಂಗಿಗೆ ಅಭಿನಯಕ್ಕೆ ಸಂಬಂಧಿಸಿದಂತೆ ಕೆಲವು ಟಿಪ್ಸ್‌ ನೀಡಿದರಂತೆ. ಕ್ಯಾಮೆರಾ ಎದುರಿಸುವುದು ಹೇಗೆ, ಸಹಜವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ನಟಿಸುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry