ಕಮಲ್ ಫಾರೂಕಿ ವಜಾ

7
ಯಾಸೀನ್ ಭಟ್ಕಳ ಕುರಿತ ಹೇಳಿಕೆ

ಕಮಲ್ ಫಾರೂಕಿ ವಜಾ

Published:
Updated:

ಲಖನೌ: ಇಂಡಿಯನ್ ಮುಜಾಹಿದ್ದೀನ್ ಸಹ ಸಂಸ್ಥಾಪಕ ಯಾಸೀನ್ ಭಟ್ಕಳ ಬಂಧನ ಕುರಿತಂತೆ ಹೇಳಿಕೆ ನೀಡಿ ವಿವಾದ ಸೃಷ್ಟಿದ್ದಕ್ಕಾಗಿ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಕಮಲ್ ಫಾರೂಕಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಗುರುವಾರ ವಜಾ ಮಾಡಲಾಗಿದೆ.`ಪೊಲೀಸರು ಅವಸರದಲ್ಲಿ ತೀರ್ಮಾನಕ್ಕೆ ಬರಬಾರದು. ಭಟ್ಕಳ ಭಯೋತ್ಪಾದಕನಾಗಿದ್ದರೆ ಅವನನ್ನು ಶಿಕ್ಷೆಗೊಳಪಡಿಸಬೇಕು. ಮುಸ್ಲಿಂ ಎನ್ನುವ ಕಾರಣಕ್ಕೆ ಆತನನ್ನು ಬಂಧಿಸಿದ್ದರೆ ಅದು ಇಡೀ ಸಮುದಾಯಕ್ಕೆ ಕೆಟ್ಟ ಸಂದೇಶ ಸಾರಿದಂತಾಗುತ್ತದೆ. ಈ ರೀತಿ ಆಗದಂತೆ ಎಚ್ಚರ ವಹಿಸಬೇಕು' ಎಂದು ಫಾರೂಕಿ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry