ಮಂಗಳವಾರ, ನವೆಂಬರ್ 19, 2019
29 °C

ಕಮಲ ಹ್ಯಾರಿಸ್ ಕ್ಷಮೆ ಕೋರಿದ ಒಬಾಮ

Published:
Updated:

ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ಅಟಾರ್ನಿ ಜನರಲ್ ಕಮಲ ಹ್ಯಾರಿಸ್ ಅವರ ಕ್ಷಮೆ ಕೋರಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಒಬಾಮ ಅಟಾರ್ನಿ ಜನರಲ್ ಕಮಲ ಹ್ಯಾರಿಸ್ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನು ಹೇಳುತ್ತ ಕಮಲ ಅಮೆರಿಕದ ಸುಂದರ (branded sexist)ಅಟಾರ್ನಿ ಜನರಲ್ ಎಂದಿದ್ದರು

ಒಬಾಮ ಅವರ ಈ ಹೇಳಿಕೆ ಅಮೆರಿಕದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಒಬಾಮ ಹ್ಯಾರಿಸ್ ಅವರ ಕ್ಷಮೆ ಕೋರಿದ್ದಾರೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕಾರ್ನೆ ತಿಳಿಸಿದ್ದಾರೆ.

ಕಮಲ ಹ್ಯಾರಿಸ್ ಅವರು ಕ್ಯಾಲಿಪೋರ್ನಿಯಾದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ಪ್ರತಿಕ್ರಿಯಿಸಿ (+)