ಶನಿವಾರ, ಜುಲೈ 31, 2021
22 °C

ಕರಕುಶಲ ಕಲಾವಿದರಿಂದ ಮಾರುಕಟ್ಟೆಗೆ ಹಸ್ತಕಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಇನ್ಫೆಂಟ್ರಿ ರಸ್ತೆಯ ಸಫೀನಾ ಪ್ಲಾಜಾದಲ್ಲಿ ಗುಜರಾತ್ ಹ್ಯಾಂಡ್‌ಲೂಮ್ಸ್ ಆಯೋಜಿಸಿರುವ ವಿವಿಧ ರಾಜ್ಯಗಳ ಕರಕುಶಲ ಕಲೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ‘ಹಸ್ತಕಲಾ’ವನ್ನು ಭಾರತೀಯ ಜವಳಿ ಮಂತ್ರಾಲಯದ ಪ್ರಾದೇಶಿಕ ಕಚೇರಿಯ ಉಪ ನಿರ್ದೇಶಕ ಟಿ.ಎಲ್.ಬಾಲಕುಮಾರ್ ಅವರು ಸೋಮವಾರ ಉದ್ಘಾಟಿಸಿದರು.ಮೇ 15ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ರಾಜಸ್ತಾನ್, ಗುಜರಾತ್, ತಮಿಳುನಾಡು ರಾಜ್ಯಗಳ 50 ಮಾರಾಟಗಾರರು ತಮ್ಮ ಕರಕುಶಲ ವಸ್ತುಗಳೊಂದಿಗೆ ಭಾಗವಹಿಸಿದ್ದಾರೆ.ಏನೇನಿದೆ? ಈ ವಸ್ತು ಪ್ರದರ್ಶನದಲ್ಲಿ ತಮಿಳುನಾಡು ರಾಜಮನೆತನದ ಚೆಟ್ಟಿಯಾರರು ಬಳಸುತ್ತಿದ್ದ ಪ್ರಾಚೀನ ಕಾಲದ ದೀಪ ಹಚ್ಚುವ ಸಮೆ, ಕಾಫಿ ಗ್ರೈಂಡರ್, ಅಡಿಕೆ ಕುಟ್ಟುವ ಸಾಧನ, ಮಸಾಲೆ ಪದಾರ್ಥಗಳ ಡಬ್ಬಿ, ಅಜ್ಜನ ಕೋಲಿನಲ್ಲೇ ಕತ್ತಿಯನ್ನಿಡುವ ಸಾಧನ, ಪಿಂಗಾಣಿ ಪಾತ್ರೆಗಳು, ಬಂಗಾಳದ ಕುಶಲಕರ್ಮಿಗಳು ಟೆರ್ರಾಕೋಟಾದಿಂದ ತಯಾರಿಸಿದ ವಿವಿಧ ಭಾವ-ಭಂಗಿಗಳ ಚಿತ್ರಗಳು, ಗುಜರಾತ್‌ನ ಸಲ್ವಾರ್ ಕಮಿಜ್, ಬಾಟಿಕ್, ಕನ್ನಡಿ ಬಳಸಿ ತಯಾರಿಸಲಾದ ಉತ್ಪನ್ನಗಳು, ರಾಜಸ್ತಾನದ ಹತ್ತಿ ಬಟೆಯ ಕುರ್ತಾ, ಪೈಜಾಮ, ಮಕ್ಕಳ ಉಡುಗೆ, ಕಾಶ್ಮೀರಿ ಕಸೂತಿ ಕಲೆಯ ಬಟ್ಟೆಗಳು, ಬಿಹಾರದ ಮಧುಬಾನಿ ಪೇಂಟಿಂಗ್‌ಗಳು ಹಾಗೂ ಕೊಯಮತ್ತೂರಿನ ಸೀರೆಗಳು ಮಾರಾಟಕ್ಕೆ ಲಭ್ಯವಿವೆ.ಪ್ರದರ್ಶನ ಮತ್ತು ಮಾರಾಟದ ಸಮಯ- ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9. ಮಾಹಿತಿಗೆ- ಟಿ.ವಿ.ಸುದರ್ಶನನ್ (ವ್ಯವಸ್ಥಾಪಕ) 89718 60130.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.