ಗುರುವಾರ , ಮೇ 19, 2022
24 °C

ಕರಕುಶಲ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಪ್ರಾಯೋಜಿತ,  ಬಿಡದಿ ಬಳಿಯಲ್ಲಿ ಇರುವ ಜೋಗರದೊಡ್ಡಿಯಲ್ಲಿ ಇರುವ ಕೆ. ಪಿ. ಜೆ. ಪ್ರಭು ಕರಕುಶಲ ತರಬೇತಿ ಸಂಸ್ಥೆಯು ಮರ- ಕಲ್ಲಿನ ಕೆತ್ತನೆ, ಲೋಹಶಿಲ್ಪ ಮತ್ತು ಟೆರ್ರಾಕೋಟಾ ಕಲೆಗಳಲ್ಲಿ ಉಚಿತ ತರಬೇತಿ ನೀಡಲು ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಿದೆ.18ರಿಂದ 35 ವರ್ಷದೊಳಗಿನ ಯುವಕರು ತರಬೇತಿಗೆ ಅರ್ಹರು. ಪ್ರವೇಶ ಅರ್ಜಿಗಳನ್ನು  ಈ ತಿಂಗಳ 25ರಂದು ನಡೆಯುವ ಸಂದರ್ಶನ ಸಂದರ್ಭ ಅಥವಾ ಅದಕ್ಕೂ ಮೊದಲೇ ಸಲ್ಲಿಸಬಹುದು. ಸಂದರ್ಶನಕ್ಕೆ ಪಾಲಕರು/ ಪೋಷಕರ ಹಾಜರಾತಿ ಕಡ್ಡಾಯ. ಗ್ರಾಮೀಣ ಪ್ರದೇಶದವರಿಗೆ ಆದ್ಯತೆ ಇದೆ. ಮಾಹಿತಿಗೆ 080-7280 127/ 94818 88176 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.