ಕರಕುಶಲ ಸರಕು ರಫ್ತು ಕುಸಿತ

ಶುಕ್ರವಾರ, ಜೂಲೈ 19, 2019
22 °C

ಕರಕುಶಲ ಸರಕು ರಫ್ತು ಕುಸಿತ

Published:
Updated:

ನವದೆಹಲಿ (ಪಿಟಿಐ): ಮೇ ತಿಂಗಳಲ್ಲಿ ಶೇ 12ರಷ್ಟು ಪ್ರಗತಿ ಕಂಡಿದ್ದ ಕರಕುಶಲ ವಸ್ತುಗಳ ರಫ್ತು ಜೂನ್‌ನಲ್ಲಿ ಮತ್ತೆ ಶೇ 3ರಷ್ಟು ಕುಸಿದಿದೆ. ಅಮೆರಿಕ, ಯೂರೋಪ್ ಸೇರಿದಂತೆ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಬೇಡಿಕೆ ಕುಸಿದಿರುವುದರಿಂದ ಜೂನ್‌ನಲ್ಲಿ 161 ದಶಲಕ್ಷ ಡಾಲರ್‌ಗಳಷ್ಟು ವಹಿವಾಟು ನಡೆದಿದೆ. ಕಳೆದ ವರ್ಷದ (2011) ಜೂನ್‌ನಲ್ಲಿ 166 ದಶಲಕ್ಷ ಡಾಲರ್‌ಗಳಷ್ಟು ವಹಿವಾಟು ನಡೆದಿತ್ತು ಎಂದು ಕರಕುಶಲ ವಸ್ತು ರಫ್ತು ಉತ್ತೇಜನ ಮಂಡಳಿ (ಇಪಿಸಿಎಚ್) ಹೇಳಿದೆ. ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗೆ ದೇಶದಿಂದ ಶೇ 60ರಷ್ಟು ಕರಕುಶಲ ಸರಕುಗಳು ರಫ್ತಾಗುತ್ತವೆ. ಆದರೆ, ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಈ ಮಾರುಕಟ್ಟೆಗಳಲ್ಲಿ ಬೇಡಿಕೆ ಕುಸಿದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry