ಕರಡು ನಿರ್ಣಯಕ್ಕೆ ಭಾರತ ಬೆಂಬಲ

7
ವಿಶ್ವಸಂಸ್ಥೆ: ಸಾಂಪ್ರದಾಯಿಕ ಶಸ್ತ್ರಾಸ್ತ್ರ ವ್ಯಾಪಾರ ಪುನರ್‌ಆರಂಭ ಒಪ್ಪಂದ

ಕರಡು ನಿರ್ಣಯಕ್ಕೆ ಭಾರತ ಬೆಂಬಲ

Published:
Updated:

ವಿಶ್ವಸಂಸ್ಥೆ (ಪಿಟಿಐ): ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ವ್ಯಾಪಾರವನ್ನು ನಿಯಂತ್ರಣಕ್ಕೆ ತರುವ ಅಂತರರಾಷ್ಟ್ರೀಯ ಒಪ್ಪಂದದ ಮಾತುಕತೆ ಪುನರ್ ಆರಂಭಿಸುವ ಬಗ್ಗೆ ವಿಶ್ವಸಂಸ್ಥೆ ಮಹಾಸಭೆ ಕೈಗೊಂಡಿರುವ ಕರಡು ನಿರ್ಣಯವನ್ನು ಭಾರತವೂ ಸೇರಿದಂತೆ 133 ರಾಷ್ಟ್ರಗಳು ಬೆಂಬಲಿಸಿವೆ. ಇದರಿಂದ ಮುಂದಿನ ಮಾರ್ಚ್ 18ರಿಂದ 28ರವರೆಗೆ ನಡೆಯಲಿರುವ ಅಂತಿಮ ಸುತ್ತಿನ ಮಾತುಕತೆಗೆ ದಾರಿ ಸುಗಮವಾಗಿದೆ.ವಿಶ್ವಸಂಸ್ಥೆಯ ಶಸ್ತ್ರಾಸ್ತ್ರ ಮಾರಾಟ ಒಪ್ಪಂದದ ಸಮಾವೇಶವು, ಈ ಬಗೆಯ ವ್ಯಾಪಾರವನ್ನು ಪಾರದರ್ಶಕವಾಗಿ ಮತ್ತು ವಿಹಿತ ಮಾದರಿಯಲ್ಲಿ ನಿರ್ವಹಿಸುವ ಬಗ್ಗೆ ಅಂತಿಮ ನಿರ್ಧಾರಕೈಗೊಳ್ಳುವ ಉದ್ದೇಶ ಹೊಂದಿದೆ ಎಂದು ಕರಡು ನಿರ್ಣಯದಲ್ಲಿ ಹೇಳಲಾಗಿದೆ.ವಿಶ್ವಸಂಸ್ಥೆಯ ಕರಡು ನಿರ್ಣಯವನ್ನು ಯಾವ ರಾಷ್ಟ್ರವೂ ವಿರೋಧಿಸಲಿಲ್ಲ. ಅಮೆರಿಕ ಸೇರಿದಂತೆ 133 ರಾಷ್ಟ್ರಗಳು ಬೆಂಬಲ ಸೂಚಿಸಿವೆ.  ಈಜಿಪ್ಟ್, ಇರಾನ್, ಸೌದಿ ಅರೇಬಿಯಾ, ಸಿರಿಯಾ, ಯೆಮನ್ ಸೇರಿದಂತೆ 17 ರಾಷ್ಟ್ರಗಳು ಮತ ಚಲಾವಣೆಯಿಂದ ದೂರ ಉಳಿದವು.ಜಾಗತಿಕ ಮಟ್ಟದಲ್ಲಿ 7000 ಕೋಟಿ ಡಾಲರ್‌ಗಳಷ್ಟು ವಹಿವಾಟು ಇರುವ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ವ್ಯಾಪಾರವನ್ನು ನಿಯಂತ್ರಣಕ್ಕೆ ತರುವ ಅಂತರರಾಷ್ಟ್ರೀಯ ಒಪ್ಪಂದದ ಮಾತುಕತೆಯನ್ನು ಬಂದೂಕು ವ್ಯಾಪಾರ ವಲಯದಲ್ಲಿ ಪ್ರಭಾವಿಯಾಗಿರುವ ಅಮೆರಿಕದ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ (ಎನ್‌ಆರ್‌ಎ) ಪ್ರಬಲವಾಗಿ ವಿರೋಧಿಸಿತ್ತು. ಇದರಿಂದಾಗಿ ಪ್ರಸ್ತಾವಿತ ಒಪ್ಪಂದವನ್ನು ಒಪ್ಪಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಅಮೆರಿಕ ಹೇಳಿದ್ದರಿಂದ ಕಳೆದ ಜುಲೈನಲ್ಲಿ ಮಾತುಕತೆ ವಿಫಲಗೊಂಡಿತ್ತು.ಅಮೆರಿಕದಲ್ಲಿ ಹುಚ್ಚಾಪಟ್ಟೆ ಗುಂಡು ಹಾರಿಸಿ, ಹತ್ಯೆಗಳು ನಡೆಯುತ್ತಿರುವ  ಈ ಹೊತ್ತಿನಲ್ಲಿ ಮಾತುಕತೆಯನ್ನು ಪುನರ್‌ಆರಂಭಿಸಲು ಕೈಗೊಂಡಿರುವ ಕರಡು ನಿರ್ಣಯವು ಬಹು ಮಹತ್ವ ಪಡೆದುಕೊಂಡಿದೆ. ಜೊತೆಗೆ ಬಹುಪಾಲು ರಾಷ್ಟ್ರಗಳು ಮಾತುಕತೆ ಮತ್ತೆ ಆರಂಭಕ್ಕೆ ಬೆಂಬಲ ಸೂಚಿಸಿರುವದರಿಂದ ಶಸ್ತ್ರಾಸ್ತ್ರ ವ್ಯಾಪಾರವು ನಿಯಂತ್ರಣಕ್ಕೆ ಒಳಪಡಲಿದೆ ಮತ್ತು ಕಾನೂನುಬದ್ಧವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry