ಕರಣ್ ಜೋಹರ್‌ಗೆ ರವಿ ಪೂಜಾರಿ ಬೆದರಿಕೆ

7

ಕರಣ್ ಜೋಹರ್‌ಗೆ ರವಿ ಪೂಜಾರಿ ಬೆದರಿಕೆ

Published:
Updated:

ಮುಂಬೈ (ಪಿಟಿಐ): ಬಾಲಿವುಡ್ ಚಿತ್ರ ನಿರ್ಮಾಪಕ ಕರಣ್ ಜೋಹರ್ ಮೊಬೈಲ್‌ಗೆ ಸಂದೇಶವೊಂದು ಬಂದಿದ್ದು, ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು  ಶಂಕಿಸಿದ್ದಾರೆ.ಕೆಲದಿನಗಳ ಹಿಂದೆ ಅಂತರರಾಷ್ಟ್ರೀಯ ನಂಬರ್‌ನಿಂದ ಕರಣ್ ಅವರ ಮೊಬೈಲ್‌ಗೆ ಸಂದೇಶವೊಂದು ಬಂದಿದೆ. ಸಂದೇಶ ಕಳುಹಿಸಿದಾಗ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ತಿಳಿಸಿರುವ ಪೊಲೀಸರು, ಎಷ್ಟು ಮೊತ್ತದ ಹಣ ಎಂದು ತಿಳಿಸಲು ನಿರಾಕರಿಸಿದ್ದಾರೆ.ಸಂದೇಶ ಕಳಿಸಿರುವುದು ರವಿ ಪೂಜಾರಿಯೇ  ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಇಂಟರ್‌ನೆಟ್ ದೂರವಾಣಿ ಬಳಸಿ ಸಂದೇಶ ಕಳುಹಿಸುತ್ತಿರುವುದರಿಂದ ಆತನಿರುವ ಸ್ಥಳ ಪತ್ತೆಹಚ್ಚಲು ಕಷ್ಟವಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಬೆದರಿಕೆ ಕರೆ ಹಿನ್ನೆಲೆಯಲ್ಲಿ ಕರಣ್ ಜೋಹರ್ ಅವರಿಗೆ ಭದ್ರತೆ ಒದಗಿಸಲಾಗಿದೆ.ಕೆಲ ದಿನಗಳ ಹಿಂದೆ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕೊಲೆ ಬೆದರಿಕೆ ಬಂದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry