ಕರಣ್ ನಟಿಸ್ತಾರಂತೆ!

7

ಕರಣ್ ನಟಿಸ್ತಾರಂತೆ!

Published:
Updated:
ಕರಣ್ ನಟಿಸ್ತಾರಂತೆ!

ಚಿತ್ರ ನಿರ್ದೇಶಕ ಕರಣ್ ಇನ್ನುಮುಂದೆ ನಟಸ್ತಾರಂತೆ. ಹಾಗೆಂದು ಕರಣ್ ಜೋಹರ್ ಗುಡಗಾಂವ್‌ನಲ್ಲಿ ಹೇಳಿದ್ದಾರೆ.ಫರ‌್ಹಾನ್ ಅಖ್ತರ್, ಫರ‌್ಹಾ ಖಾನ್ ಎಲ್ಲರೂ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಫರ‌್ಹಾನ್ ಅಂತೂ ಮಿಂಚ್ತಾ ಇದ್ದಾರೆ. ನಾನೂ ನಟಿಸಬಲ್ಲೆ. ನಟನೆಯ ಬಾಗಿಲನ್ನು ಇದೀಗ ಮುಕ್ತವಾಗಿ ತೆರೆದಿಟ್ಟಿದ್ದೇನೆ. ನನಗೆ ಹೊಂದುವಂಥ ಸ್ಕ್ರಿಪ್ಟ್ ಮತ್ತು ಪಾತ್ರ ದೊರೆತರೆ ಅಭಿನಯವನ್ನೂ ಪ್ರಯತ್ನಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ ಜೋಹರ್.`ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ~ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕರಣ್ ಕಾಣಿಸಿಕೊಂಡಿದ್ದರು. ಆಮೇಲೆ ತೆರೆಯ ಮೇಲೆ ಕಾಣಿಸಿಕೊಳ್ಳುವುದಕ್ಕಿಂತ ಕ್ಯಾಮೆರಾ ಹಿಂದೆ ಇರುವುದರಲ್ಲಿಯೇ ಖುಷಿ ಇದೆ ಎನ್ನುತ್ತಿದ್ದ ಅವರು ಈಗ ಕ್ಯಾಮೆರಾ ಮುಂದೆ ಬರಲು ಉತ್ಸುಕರಾಗಿದ್ದಾರೆ.`ಸ್ಟೂಡೆಂಟ್ ಆಫ್ ದಿ ಇಯರ್~ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕರಣ್, ಹೊಸಬರೊಂದಿಗೆ ಕೆಲಸ ಮಾಡಿ, ನವಜವ್ವನಿಗನಾಗಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ.

`ಸೆಟ್‌ನಲ್ಲಿ ಪ್ರೊಡಕ್ಷನ್ ಯೂನಿಟ್‌ನ ಹುಡುಗರೂ ಹೊಸಬರಾಗಿದ್ದರು. ಎಲ್ಲರೂ 20ರಿಂದ 25 ವರ್ಷ ವಯೋಮಾನದವರೇ. ಖುಷಿಖುಷಿಯಾಗಿರುತ್ತಿದ್ದರು. ಕೆಲಸವನ್ನು ಪ್ರೀತಿಯಿಂದ, ಆಸ್ಥೆಯಿಂದ ಮಾಡುತ್ತಿದ್ದರು. ಅವರೊಡನೆ ನಾನೂ ನಕ್ಕು ನಲಿಯುತ್ತ ಚಿತ್ರವನ್ನು ನಿರ್ದೇಶಿಸಿದೆ. ಇದೊಂಥರ ಹೊಸಬಗೆಯ ಅನುಭವ~ ಎಂದೆಲ್ಲ ತಮ್ಮ ತಂಡವನ್ನು ಹೊಗಳಿದ್ದಾರೆ.`ಈ ಚಿತ್ರದೊಂದಿಗೆ ನಾನು ಬೆಳೆದಿದ್ದೇನೆ ಎಂದು ಹೇಳಲಾಗುವುದಿಲ್ಲ. ಈ ಚಿತ್ರ ತಂಡದೊಂದಿಗೆ ನಾನು ಚಿಕ್ಕವನಾಗಿದ್ದೇನೆ~ ಎಂದಿದ್ದಾರೆ ಕರಣ್. ತಮ್ಮ ನಿರ್ದೇಶನದಲ್ಲಿಯೇ ನಟಿಸಬಾರದೇಕೆ ಎಂಬ ಪ್ರಶ್ನೆಗೆ ನಕ್ಕು ಸುಮ್ಮನಾದ ಕರಣ್, `ಇನ್ನೊಬ್ಬರ ನಿರ್ದೇಶನದಲ್ಲಿ ನಟನಾಗುವ ಆಸೆ ಇದೆ. ಸದ್ಯಕ್ಕೆ ಯಾರೂ ನನ್ನನ್ನು ಈ ನಿಟ್ಟಿನಲ್ಲಿ ಯೋಚಿಸಿಲ್ಲ. ಇನ್ನು ಮೇಲೆ ಅಂಥ ಅವಕಾಶಗಳು ಬರಬಹುದು~ ಎಂದೂ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry