ಕರಾಚಿಯಲ್ಲಿ ಬಾಂಬ್ ಸ್ಫೋಟ 5 ಸಾವು, 50 ಜನರಿಗೆ ಗಾಯ

7

ಕರಾಚಿಯಲ್ಲಿ ಬಾಂಬ್ ಸ್ಫೋಟ 5 ಸಾವು, 50 ಜನರಿಗೆ ಗಾಯ

Published:
Updated:
ಕರಾಚಿಯಲ್ಲಿ ಬಾಂಬ್ ಸ್ಫೋಟ 5 ಸಾವು, 50 ಜನರಿಗೆ ಗಾಯ

ಇಸ್ಲಾಮಾಬಾದ್ (ಪಿಟಿಐ): ಕರಾಚಿಯ ರೈಲು ನಿಲ್ದಾಣದ ಎದುರು ಬಸ್ಸಿನಲ್ಲಿ ಶಕ್ತಿಯುತ ಬಾಂಬ್ ಸ್ಫೋಟಿಸಿ ಐದು ಜನರು ಸತ್ತಿದ್ದು, 50 ಜನರಿಗೆ ಗಾಯಗಳಾಗಿವೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥರು ಕರಾಚಿಗೆ ಬಂದಾಗ ಉಳಿದುಕೊಳ್ಳುವ ತಾಣದಿಂದ ಕೇವಲ ಅರ್ಧ ಕಿ. ಮೀ. ದೂರದಲ್ಲಿ ಈ ಸ್ಫೋಟ ಸಂಭವಿಸಿದೆ.ದಂಡು ರೈಲು ನಿಲ್ದಾಣದ ಬಳಿಯ ಬಸ್ ನಿಲ್ದಾಣದಿಂದ ಬಸ್ ಹೊರಟ ಕೆಲವೇ ಕ್ಷಣದಲ್ಲಿ ಬಾಂಬ್ ಸ್ಫೋಟಿಸಿದೆ. ಸ್ಫೋಟದ ರಭಸಕ್ಕೆ ದೇಹಗಳು ಛಿದ್ರಛಿದ್ರವಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಜಿನ್ನಾ ಆಸ್ಪತ್ರೆಗೆ ದಾಖಲಾಗಿರುವ 48 ಜನರ ಪೈಕಿ ಎಂಟು ಜನರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry