ಭಾನುವಾರ, ಏಪ್ರಿಲ್ 11, 2021
20 °C

ಕರಾಚಿ: ಹಿಂಸಾಚಾರಕ್ಕೆ10 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ (ಪಿಟಿಐ): ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಕರಾಚಿಯಲ್ಲಿ ಭಾನುವಾರ ರಾಜಕೀಯ ಹಿಂಸಾಚಾರ ಪುನಃ ಆರಂಭವಾಗಿದ್ದು, 10 ಮಂದಿ ಬಲಿಯಾಗಿದ್ದಾರೆ.ಹಿಂಸಾಚಾರ ಶಮನಗೊಳಿಸಲು ‘ಕಂಡಲ್ಲಿ ಗುಂಡಿಕ್ಕು’ವ  ಆದೇಶವನ್ನು ಸರ್ಕಾರ ಹಾಗೂ ಕಾನೂನು ಜಾರಿ ನಿರ್ದೇಶನ ಪ್ರಾಧಿಕಾರ ಜಾರಿ ಮಾಡಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಶಂಕಿತ ಹಂತಕರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಕರಾಚಿಯಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರದ ಬಗ್ಗೆ ಕಳೆದ ವಾರ ಒಳಾಡಳಿತ ಸಚಿವ ರೆಹಮಾನ್ ಮಲ್ಲಿಕ ಹಾಗೂ ಕಾನೂನು ಜಾರಿ ನಿರ್ದೇಶನಾಲಯದ ಕಚೇರಿಯ ಅಧಿ ಕಾರಿಗಳು ಕರಾಚಿಯಲ್ಲಿನ ಸಭೆ ನಡೆಸಿ ಹಿಂಸಾಚಾರ ತಡೆಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ  ಚರ್ಚೆ ನಡೆಸಿದರು ಎಂದು ಪೊಲೀಸ ಮೂಲಗಳು ತಿಳಿಸಿವೆ.

ಹಿಂಸಾಚಾರಕ್ಕೆ ಬಲಿಯಾದವರಲ್ಲಿ ಜಮಾತ್-ಎ-ಇಸ್ಲಾಮಿ ಪಕ್ಷದ ಕಾರ್ಯಕರ್ತರು ಸೇರಿದ್ದಾರೆ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.