ಕರಾಟೆ: ಚಿನ್ನ ಗೆದ್ದ ಗದ್ದೆಪ್ಪ ಕೊರವರ

7

ಕರಾಟೆ: ಚಿನ್ನ ಗೆದ್ದ ಗದ್ದೆಪ್ಪ ಕೊರವರ

Published:
Updated:

ಮುದ್ದೇಬಿಹಾಳ: ಮಾಸ್ಕೋಡಿ-ಡೊ ಫೆಡರೇಶನ್ ಆಫ್ ಇಂಡಿಯಾ (ಕರಾಟೆ) ಆಶ್ರಯದಲ್ಲಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ 70–-75 ಕೆಜಿ ವಿಭಾಗದಲ್ಲಿ  ಮುದ್ದೇಬಿಹಾಳದ ಗದ್ದೆಪ್ಪ ಕೊರವರ ಚಿನ್ನದ ಪದಕ ಪಡೆದಿದ್ದಾರೆ. 45-–50 ಕೆಜಿ ವಿಭಾಗದಿಂದ ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಮುತ್ತವ್ವ ಕಾಂಬಳೆ ಎಂಬ ವಿದ್ಯಾರ್ಥಿ­ಗಳು ಪ್ರಥಮ ಸ್ಥಾನ ಪಡೆಯುವ ಮೂಲಕ  ರಾಜ್ಯಕ್ಕೆ ಚಿನ್ನದ ಪದಕ ತಂದಿದ್ದಾರೆ.ರಾಷ್ಟ್ರಮಟ್ಟದ ಟೂರ್ನಿಯಲ್ಲಿ ದೇಶದ 20 ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ಕರ್ನಾಟಕದಿಂದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುದ್ದೇಬಿಹಾಳದ ಶಿವುಕುಮಾರ ಶಾರದಳ್ಳಿ ಚೇತನ ಕೆಂದೂಳಿ ಅವರ ನೇತೃತ್ವ­ದಲ್ಲಿ ಒಟ್ಟು 17 ಜನ ಸದಸ್ಯರು ದೆಹಲಿಗೆ ತೆರಳಿದ್ದರು.

ಅಂತಿಮವಾಗಿ ತಂಡದ ಪರವಾಗಿ ವಿವಿಧ ವಿಭಾಗಗಳಲ್ಲಿ  14 ವಿದ್ಯಾರ್ಥಿಗಳು ರಾಜ್ಯವನ್ನು ಪ್ರತಿನಿಧಿಸಿ ಪಂದ್ಯಾವಳಿಯಲ್ಲಿ ಒಟ್ಟು 5 ವಿಭಾಗಗಳಲ್ಲಿ ಗೆಲುವು ಸಾಧಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಗದ್ದೆಪ್ಪ ಅವರನ್ನು ಅವರ ತರಬೇತುದಾರರು ಅಭಿನಂದಿಸಿದ್ದಾರೆ.ಜಯ ಗಳಿಸಿದ ರಾಜ್ಯದ ಇತರ ವಿದ್ಯಾರ್ಥಿಗಳು: ಗದ್ದೆಪ್ಪ ಕೊರವರ ಮುದ್ದೇಬಿಹಾಳ (ಚಿನ್ನ), ಮುತ್ತವ್ವ ಕಾಂಬಳೆ ಮುಧೋಳ (ಚಿನ್ನ), ಚಿದಾನಂದ ರಾಠೋಡ (ಬೆಳ್ಳಿ)ಮುದ್ದೇಬಿಹಾಳ, ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮೂಳೆ ಗ್ರಾಮದ ಸುನೀಲ ಮುದ್ದೇಬಿಹಾಳ(ಕಂಚು) ಹಾಗೂ ಅಮೀತ ಮಲ್ಲುಕಾನ(ಕಂಚು). ಪ್ರಶಸ್ತಿ ಗೆಲ್ಲುವ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry