ಮಂಗಳವಾರ, ಜುಲೈ 27, 2021
21 °C

ಕರಾಟೆ ಶಿಕ್ಷಕಿಯಾದ ಬಾಲಕಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ಮನಸ್ಸು ಪ್ರಪಂಚದ ಅರಿವೆಯಿಲ್ಲದೆ ತಮ್ಮ ತುಂಟಾಟದಲ್ಲಿ ಮುಳಗಿರುತ್ತದೆ.ಆದರೆ ಮೈಸೂರಿನ ದಿಯಾ ಎಸ್‌. ಅರಸು ಆ ಮನಸ್ಸಿನ ಗೋಡೆಯ ನಡುವೆಯೂ ಒಬ್ಬ ಕ್ರೀಡಾ ಪಟು ಆಗಬೇಕೆಂಬ ಅಭಿಲಾಷೆಯ ಜೊತೆಗೆ ಛಲ ಹೊತ್ತು ನಿಂತಾಕೆ.ಇದನ್ನು ಮಗುವಿದ್ದಾಗಲೇ ಗುರುತಿಸಿ. ಪ್ರೋತ್ಸಾಹಿಸಿದವರು ಸೆನ್‌ ಸಾಯಿ ಮೊಹಮದ್‌ ಸಲೀಂ. ತನ್ನ ಮೂರುವರೆ ವರ್ಷದಲ್ಲಿ (ಓಕಿನೋ ಒನ್‌ ಶೋರಿನ್ರಿಯಾ) ಕರಾಟೆ ಪ್ರಾರಂಭಿಸಿದ್ದಳು.7ನೇ ವರ್ಷದಲ್ಲಿ ಏ.ಐ.ಕೆ.ಎಫ್‌ ಬೆಲ್ಟ್‌ ಶ್ರೇಣಿ (ಅಖಿಲ ಭಾರತ ಕರಾಟೆ ಡೊ ಫಡರೇಷನ್‌) ಕಥ್ಹ ಮತ್ತು ಕುಮಿತೆ ವಿಭಾಗದಲ್ಲಿ ಬ್ಲಾಕ್‌ ಬೆಲ್ಟ್‌ ಪಡೆದ ರಾಜ್ಯದ ಕಿರಿಯ ಕರಾಟೆ ಪಟು ಎನ್ನುವ ಕೀರ್ತಿ ದಿಯಾ ಅವರದ್ದು!ಚಿಕ್ಕ ವಯಸ್ಸಿನಲ್ಲೇ ಇಂತಹ ಸಾಹಸ ಕ್ರೀಡೆಯನ್ನು ಅಭ್ಯಾಸ ಮಾಡಿಕೊಂಡಿರುವ ದಿಯಾ ಅರಸ್‌ ಕರಾಟೆ ಕಲಿಸುವ ಶಿಕ್ಷಕಿಯಾಗಿ ಮೈಸೂರಿನಲ್ಲಿ ಹಲವಾರು ಕರಾಟೆ ಪಟುಗಳಿಗೆ ತರಬೇತಿ ನೀಡುತ್ತಿದ್ದಾಳೆ.ವಯಸ್ಸಿಗೂ ಮೀರಿದ ಪ್ರತಿಭೆ, ಛಲ ಹಾಗೂ ಸಾಹಸ ದಿಯಾ ಅವರನ್ನು ಈ ಎತ್ತರಕ್ಕೆ ಬೆಳಸಿ ನಿಲ್ಲಿಸಿದೆ. ಹೀಗೆ ಕರಾಟೆ ಶಿಕ್ಷಕಿಯಾಗಿರುವ ದಿಯಾ ಚಿಕ್ಕ ವಯಸ್ಸಿನಲ್ಲಿ ಬದುಕಿನ ದೊಡ್ಡದೊಂದು ಸಾಧನೆಯನ್ನು ತಮ್ಮದಾಗಿಸಿಕೊಂಡ ಶ್ರೇಯ ಅವರದ್ದು!. ದಿಯಾಗೆ ಈಗ ಕೇವಲ 10 ವರ್ಷ ಮಾತ್ರ. ಮೈಸೂರಿನ ವಿದ್ಯಾವರ್ಧಕ ಸಂಘದ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾಳೆ.ಕರಾಟೆ ಆಸಕ್ತಿ:  ಸೀಮೆಸುಣ್ಣದ ಗಂಧದ ನಡುವೆ, ಮಕ್ಕಳ ಜೊತೆ ಆಟ ಪಾಠದಲ್ಲಿ ನಲಿಯುವ ಮೃದು ಮನಸ್ಸುಳ್ಳು ದಿಯಾ ರವೀಂದ್ರ ಕಲಾಮಂದಿರದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಂದು ಬಹುಮಾನ ವಿತರಣೆ ಸಮಾರಂಭದ ವೇಳೆ ಅಪ್ಪನ ಬಳಿ ಬಂದು `ನನಗೆ ಯಾಕೆ ಮೆಡಲ್‌ ಕೊಡಲಿಲ್ಲ ಎಂದು ಕೇಳಿ ನಿರಾಸೆಯ ಮೊಗ ಹೊತ್ತರು.ಅವರ ಅಂದಿನ ನಿರಾಸೆ, ಪ್ರಯತ್ನ ಇಂದು ಸಾಕಷ್ಟು ಪ್ರಶಸ್ತಿ, ಸನ್ಮಾನ, ಗೌರವವನ್ನು ತಂದುಕೊಟ್ಟಿದೆ. ಅದಕ್ಕಾಗಿ ದಿಯಾ ಕರಾಟೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು! ದಿಯಾ ಆಸೆಗೆ ಅವರ ತಂದೆ ಬೆಂಬಲ ನೀಡಿದರು. ರೆನ್‌.ಷಿ ಶಿವದಾಸ್‌ ಅವರನ್ನು ಗುರುವಾಗಿ ಸ್ವೀಕರಿಸಿ ಕರಾಟೆ ಕಲಿಯಲು ಆರಂಭಿಸಿದಳು.ಬದುಕಿನ ಒಂದು ಹಂತದಲ್ಲಿನ ನಿರಾಸೆಯನ್ನು, ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡು ದಿಯಾ ಇಂದು ಬ್ಲಾಕ್‌ ಬೆಲ್ಟ್‌ ಮುಡಿಗೇರಿಸಿಕೊಂಡು ಪ್ರಯತ್ನ ಹಾಗೂ ಸಾಹಸವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ.ದಿಯಾ ಅವರ ತಾಯಿ ರೂಪ ಕೂಡ ಕರಾಟೆ ಕಲಿತಿದ್ದು ಮಗಳಿಗೆ ಅದರ ಅಭ್ಯಾಸ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡುತ್ತಿದ್ದಾರೆ. `ಪಾಲಕರ ಪ್ರೋತ್ಸಾಹದಿಂದ ಕರಾಟೆ ಪಟುವಾಗಲು ಸಹಾಯವಾಗಿದೆ~ ಅವರ ನೈತಿಕ ಬೆಂಬಲ, ಪ್ರೋತ್ಸಾಹದಿಂದ ನನಗೆ ಸಾಧನೆ ಮಾಡಲು ಸಾಧ್ಯವಾಯಿತು~ ಎಂದು ತನ್ನ ಪಾಲಕರ ಬಗ್ಗೆ ದಿಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಪುಟ್ಟ ಹುಡುಗಿಯ ದೊಡ್ಡ ಸಾಧನೆಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿವೆ.ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ 2 ಚಿನ್ನ, 2ಬೆಳ್ಳಿ. ರಾಷ್ಟೀಯ ಮಟ್ಟದಲ್ಲಿ 14 ಚಿನ್ನ, 3 ಬೆಳ್ಳಿ, 3. ರಾಷ್ಟ್ರಿಯ ಕೊಬುಡೊ (ಆಯುಧ ಕ್ರೀಡೆ) 2 ಚಿನ್ನ. ರಾಜ್ಯ ಕೊಬುಡೊ (ಆಯುಧ ಕ್ರೀಡೆ) 17 ಪ್ರಥಮ ಬಹುಮಾನ, 45 ದ್ವಿತೀಯ ಬಹುಮಾನ. ರಾಜ್ಯ ಮಟ್ಟದ ನೃತ್ಯದಲ್ಲಿ 24 ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಗಳು ಬಾಲ ಪ್ರತಿಭೆಯ ಭವಿಷ್ಯ ಬೆಳಗಲು ನೆರವಾಗಿವೆ.ಸಾಹಸಗಳಿಗೆ ಒಗ್ಗಿಕೊಳ್ಳುವ ಮನೋಭಾವ ಹೊಂದಿರುವ  ದಿಯಾ ಹಣೆಯಿಂದ ಒಂದು ನಿಮಿಷದಲ್ಲಿ 31  ಹಂಚುಗಳನ್ನು ಒಡೆದು ಹೊಸ ಸಾಧನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದಿಯಾ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳು ಪುರಸ್ಕರಿಸಿ ಗೌರವಿಸಿವೆ.ಕರಾಟೆ ಜತೆ ಜತೆಗೆ ದಿಯಾ ಇತರ ಹವ್ಯಾಸಗಳನ್ನೂ ಮೈಗೂಡಿಸಿಕೊಂಡಿದ್ದಾರೆ.ಚುರುಕು ಬುದ್ದಿ, ಸೂಕ್ಷ್ಮತೆಯನ್ನು ಹೊಂದಿರುವ ದಿಯಾ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ವಿಷಯಗಳನ್ನು ಅರ್ಥೈಯಿಸಿಕೊಳ್ಳುವ ಅಗಾಧ ಬುದ್ದಿಶಕ್ತಿಯನ್ನು ಹೊಂದಿದ್ದಾಳೆ.ಓದಿನಲ್ಲಿಯೂ ಮೊದಲಿರುವ ದಿಯಾ ಏಕವ್ಯಕ್ತಿ ನೃತ್ಯ, ಸಮೂಹ ನೃತ್ಯ, ಜಾನಪದ, ಚಿತ್ರ ಕಲೆ, ಚಾರಣ, ಶ್ಲೋಕ ಪಠಣ, ಭಾವಗೀತೆ, ವೇಷಭೂಷಣ, ಸಂಗೀತದಂಥಹ ಸಾಹಸ ಕ್ರೀಡೆಗಳಲ್ಲಿಯೂ ಕೂಡ ನೈಪುಣ್ಯತೆ ಹೊಂದಿದ್ದಾರೆ.  ದಿಯಾ ಅವರ ಸಾಹಸ ಪ್ರತಿಭೆ ಅವರಿಗೆ ಸಾಕಷ್ಟು ಗೌರವವನ್ನು ತಂದುಕೊಟ್ಟಿದೆ.ಪ್ರತಿಯೊಬ್ಬರು ಪ್ರಯತ್ನಿಸಿದರೆ ಏನೂ ಬೇಕಾದರೂ ಸಾಧನೆ ಮಾಡಬಹುದು. ಪ್ರಯತ್ನದ ಜೊತೆಗೆ, ಛಲ ಹಾಗೂ ಸಂಕಲ್ಪ ಶಕ್ತಿ ಕೂಡಾ ಅಗತ್ಯ ಎಂದು ಹೇಳುವ ದಿಯಾ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಆದರ್ಶಗಳನ್ನು ಅಳವಡಿಸಿಕೊಂಡು ರಾಷ್ಟ್ರಾಧ್ಯಕ್ಷರಾಗುವ ಆಸೆ ನನ್ನದು ಎಂದು ಹೇಳಿ ಮೌನಕ್ಕೆ ಶರಣಾದರು ದಿಯಾ!.ಪ್ರತಿ ಮಕ್ಕಳಲ್ಲೂ ಪ್ರತಿಭೆಯೆಂಬುದು ಇರುತ್ತದೆ. ಅದನ್ನು ಸರಿಯಾಗಿ ಗುರುತಿಸುವ ಅವಶ್ಯಕತೆ ಇದೆ. ಆ ಪ್ರತಿಭೆ ಪ್ರದರ್ಶನ ಮಾಡಲು ಸೂಕ್ತ ವೇದಿಕೆ ದೊರೆತಾಗ ಆ ಮಕ್ಕಳು ಕೂಡಾ  ದಿಯಾನಂತೆ ಅಭೂತಪೂರ್ವ ಸಾಧನೆಯೊಂದನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪಾಲಕರ ಹಾಗೂ ಶಿಕ್ಷಕರ ಬೆಂಬಲ ಅಗತ್ಯ!.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.