ಶುಕ್ರವಾರ, ಮೇ 7, 2021
27 °C
ಅಕ್ರಮ ಶಸ್ತ್ರಾಸ್ತ್ರ ಮಾರಾಟಕ್ಕೆ ಅಂಕುಶ

ಕರಾರಿಗೆ 65 ದೇಶಗಳ ಸಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ (ಎಪಿ): ಜಗತ್ತಿನಾದ್ಯಂತ ಅಕ್ರಮ ಶಸ್ತ್ರಾಸ್ತ್ರ ಮಾರಾಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ರೂಪಿಸಿರುವ ಐತಿಹಾಸಿಕ ಕರಾರಿಗೆ 65ಕ್ಕೂ ಹೆಚ್ಚು ದೇಶಗಳು  ಸಹಿ ಹಾಕಿವೆ.ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ವಹಿವಾಟು ನಡೆಸುವ ಅಮೆರಿಕ ಕೂಡ ಈ ಒಪ್ಪಂದಕ್ಕೆ ಶೀಘ್ರವೇ ಸಹಿ ಹಾಕುವುದಾಗಿ ಘೋಷಿಸಿದ್ದು, ವಿಶ್ವಸಂಸ್ಥೆ ರೂಪಿಸಿರುವ ಈ ಕರಾರಿಗೆ ಬಲ ಬಂದಂತಾಗಿದೆ. ಅಲ್ಲದೇ ಅಕ್ರಮ ಶಸ್ತ್ರಾಸ್ತ್ರ ಸಾಗಣೆಗೆ ತಡೆ ಹಾಕುವ ಜಾಗತಿಕ ಆಂದೋಲನಕ್ಕೂ ಬಹುತೇಕ ಯಶಸ್ಸು ಲಭಿಸಿದಂತಾಗಿದೆ.

ಏಪ್ರಿಲ್ ಎರಡರಂದು ನಡೆದ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಈ ಕರಾರಿಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಆದರೆ, ಶಸ್ತ್ರಾಸ್ತ್ರಗಳನ್ನು ಭಾರಿ ಪ್ರಮಾಣದಲ್ಲಿ ರಫ್ತು ಮಾಡುವ ರಷ್ಯಾ, ಚೀನಾದಂಥ ಪ್ರಮುಖ ದೇಶಗಳು ಹಾಗೂ ಆಮದು ಮಾಡಿಕೊಳ್ಳುವ ಭಾರತ, ಸೌದಿ ಅರೇಬಿಯಾ, ಇಂಡೋನೇಷ್ಯಾ ಮತ್ತು ಈಜಿಪ್ಟ್ ಮತ್ತಿತರ ದೇಶಗಳು ಈವರೆಗೆ ಕರಾರಿಗೆ ಸಹಿ ಹಾಕುವ ಸೂಚನೆ ನೀಡಿಲ್ಲ. ಐವತ್ತು ದೇಶಗಳು ಅನುಮತಿ ನೀಡಿದ ಬಳಿಕವಷ್ಟೇ ಈ ಒಪ್ಪಂದವು ಜಾರಿಗೆ ಬರಲಿದೆ.ಇದನ್ನು ಅನುಮೋದಿಸುವ ದೇಶಗಳು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಸಾಗಣೆ ಹಾಗೂ ದಲ್ಲಾಳಿಗಳ ನಿಯಂತ್ರಣಕ್ಕೆ ರಾಷ್ಟ್ರೀಯ ನಿಯಮಾವಳಿಗಳನ್ನು ರೂಪಿಸಬೇಕಾಗುತ್ತದೆ.ಭಯೋತ್ಪಾದಕರು, ಕಡಲುಗಳ್ಳರು, ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಬಳಸುವುದಕ್ಕೆ ಈ ಒಪ್ಪಂದ ಲಗಾಮು ಹಾಕಲಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.