ಗುರುವಾರ , ಮೇ 6, 2021
32 °C

ಕರಾವಳಿಯಲ್ಲಿ ಮುಂಗಾರು ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾವಳಿಯಲ್ಲಿ ಮುಂಗಾರು ಚುರುಕು

ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ದಕ್ಷಿಣ ಒಳನಾಡಿದ ಕೆಲವು ಪ್ರದೇಶಗಳು ಮತ್ತು ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿದೆ.



ಕಾರ್ಕಳದಲ್ಲಿ 18 ಸೆಂ.ಮೀ ಮಳೆಯಾಗಿದೆ. ಬಂಟ್ವಾಳ 17, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಭಟ್ಕಳ 16, ಉಡುಪಿ 15, ಮಂಗಳೂರು, ಮಾಣಿ, ಕುಮಟಾ 14, ಮೂಲ್ಕಿ, ಪುತ್ತೂರು, ಕೋಟ, ಕೊಲ್ಲೂರು 13, ಮೂಡುಬಿದಿರೆ, ಸುಳ್ಯ, ಶಿರಾಲಿ 12, ಸಿದ್ದಾಪುರ, ನೀಲ್ಕುಂದ, ಭಾಗಮಂಡಲ 11, ಉಪ್ಪಿನಂಗಡಿ, ಕುಂದಾಪುರ, ಹೊನ್ನಾವರ, ಹುಲಿಕಲ್, ಆಗುಂಬೆ 10, ಗೋಕರ್ಣ, ಅಂಕೋಲ 9, ಗೇರುಸೊಪ್ಪ, ಲಿಂಗನಮಕ್ಕಿ 8, ಬೆಳ್ತಂಗಡಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಕಾರವಾರ, ಸಿದ್ದಾಪುರ (ಉ.ಕ), ಕೊಟ್ಟಿಗೆಹಾರ 7, ಕ್ಯಾಸಲ್ ರಾಕ್, ಮಡಿಕೇರಿ, ನಾಪೋಕ್ಲು, ಹೊಸನಗರ 6, ತಾಳಗುಪ್ಪ, ಶೃಂಗೇರಿ, ಕಳಸ 5, ಶಿರಸಿ, ಲೋಂಡ, ಮೂರ್ನಾಡು, ಪೊನ್ನಂಪೇಟೆ, ವಿರಾಜಪೇಟೆ, ಮಾದಾಪುರ, ತೀರ್ಥಹಳ್ಳಿ, ಕಮ್ಮರಡಿ 4, ಬನವಾಸಿ, ಯಲ್ಲಾಪುರ, ಜೋಯಿಡಾ, ಸೋಮವಾರಪೇಟೆ, ಸಾಗರ, ಮೂಡಿಗೆರೆ, ಜಯಪುರ, ಕೊಪ್ಪ 3, ಹಾರಂಗಿ, ತ್ಯಾಗರ್ತಿ, ಹುಂಚದಕಟ್ಟೆ, ಸೊರಬ, ಸಕಲೇಶಪುರ, ಹಾಸನ 2, ಕಿರವತ್ತಿ, ಮಂಚಿಕೇರಿ, ಮುಂಡಗೋಡು, ಖಾನಾಪುರ, ಬೆಳಗಾವಿ, ಕಾಗಿನೆಲೆ, ಹಾವೇರಿ, ಕುಶಾಲನಗರ, ಆನಂದಪುರ, ಅರಸಾಳು, ಆನವಟ್ಟಿ, ಬಾಳೆಹೊನ್ನೂರು, ಎನ್.ಆರ್.ಪುರ, ಕೊಣನೂರು, ಸರಗೂರು, ಗುಡಿಬಂಡೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.



ಮುನ್ಸೂಚನೆ : ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಜಿಲ್ಲೆಗಳು, ದಕ್ಷಿಣ ಒಳನಾಡಿನ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.