ಕರಾವಳಿಯಲ್ಲಿ ಸಾಧಾರಣ ಮಳೆ

ಮಂಗಳವಾರ, ಜೂಲೈ 16, 2019
25 °C

ಕರಾವಳಿಯಲ್ಲಿ ಸಾಧಾರಣ ಮಳೆ

Published:
Updated:

ಕಾರವಾರ: ಜಿಲ್ಲೆಯ ಕರವಾಳಿಯಲ್ಲಿ ಸೋಮವಾರ ಸಾಧಾರಣ ಮಳೆಯಾಗಿದ್ದು, ಮಲೆನಾಡು ಹಾಗೂ ಅರೆ ಬಯಲುಸೀಮೆ ಪ್ರದೇಶಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ.ಕರವಾಳಿ ಪ್ರದೇಶಗಳಾದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರದಲ್ಲಿ ಬೆಳಿಗ್ಗೆ ಮಳೆ ಬಿರುಸಿನಿಂದ ಆರಂಭವಾಯಿತಾದರೂ ನಂತರ ಬಿಟ್ಟಿ ಬಿಟ್ಟು ಹನಿಯಿತು.ಮಲೆನಾಡಿನಲ್ಲಿ ಕ್ಷೀಣ: ಮಲೆನಾಡು ಪ್ರದೇಶಗಳಾದ ಶಿರಸಿ, ಯಲ್ಲಾಪುರ ಮತ್ತು ಸಿದ್ಧಾಪುರದಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಹಳಿಯಾಳ, ದಾಂಡೇಲಿ ಮತ್ತು ಮುಂಡಗೋಡದಲ್ಲಿ ಮಳೆ ಕ್ಷೀಣಿಸಿತ್ತು.ಜಿಲ್ಲೆಯಲ್ಲಿ 52.7 ಮಿ.ಮೀ. ಮಳೆ

ಜುಲೈ 8 ರಂದು ಬೆಳಿಗ್ಗೆ 8 ಗಂಟೆ ಅಂತ್ಯಕ್ಕೆ ಜಿಲ್ಲೆಯಾದ್ಯಂತ ಸರಾಸರಿ 52.7 ಮಿ.ಮೀ ಮಳೆಯಾಗಿದೆ. ಅಂಕೋಲಾ 76.2 ಮಿ.ಮೀ, ಭಟ್ಕಳ 113.4 ಮಿ.ಮೀ, ಹಳಿಯಾಳ 0.5ಮಿ.ಮೀ, ಹೊನ್ನಾವರ 102.4ಮಿ.ಮೀ, ಕಾರವಾರ 109 ಮಿ.ಮೀ, ಕುಮಟಾ 96.3 ಮಿ.ಮೀ, ಮುಂಡಗೋಡ 3.2 ಮಿ.ಮೀ, ಸಿದ್ದಾಪುರ 27.4 ಮಿ.ಮೀ, ಶಿರಸಿ 9ಮಿ.ಮೀ, ಜೋಯಿಡಾ 26ಮಿ.ಮೀ, ಯಲ್ಲಾಪುರ 15.8ಮಿ.ಮೀ ಮಳೆಯಾಗಿದೆ. ಜುಲೈ 1 ರಿಂದ ಇದುವರೆಗೆ ಸರಾಸರಿ 410.5 ಮಿ.ಮೀ. ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry