ಶನಿವಾರ, ಆಗಸ್ಟ್ 17, 2019
27 °C

ಕರಾವಳಿ, ಉತ್ತರ ಒಳನಾಡಿನಲ್ಲಿ ಭಾರಿ ಮಳೆ

Published:
Updated:

ಬೆಂಗಳೂರು: ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಕರಾವಳಿ, ಉತ್ತರ ಒಳನಾಡಿನಲ್ಲಿ ಮಳೆಯಾಗಿದೆ. ಕೊಟ್ಟಿಗೆಹಾರದಲ್ಲಿ 27 ಸೆಂ.ಮೀ.  ಮಳೆಯಾಗಿದೆ.ಭಾಗಮಂಡಲ 25, ಹುಂಚದಕಟ್ಟೆ, ಸಕಲೇಶಪುರ 19, ಕಳಸ 18, ಸೋಮವಾರಪೇಟೆ, ಕಮ್ಮರಡಿ 16, ಹೊಸನಗರ 15, ನಾಪೋಕ್ಲು, ಲಿಂಗನಮಕ್ಕಿ 14, ಗೇರುಸೊಪ್ಪ, ಸಿದ್ದಾಪುರ (ಉ.ಕ), ಮೂರ್ನಾಡು, ತಾಳಗುಪ್ಪ, ಶೃಂಗೇರಿ 12, ಮೂಡಿಗೆರೆ 11, ಯಲ್ಲಾಪುರ, ವಿರಾಜಪೇಟೆ, ಮಾದಾಪುರ, ಆಗುಂಬೆ, ಕೊಪ್ಪ 10, ಲೋಂಡ, ಪೊನ್ನಂಪೇಟೆ, ಜಯಪುರ 9, ಸಾಗರ 8, ಬೆಳ್ತಂಗಡಿ, ಉಪ್ಪಿನಂಗಡಿ, ಗೋಕರ್ಣ, ಕದ್ರಾ, ತ್ಯಾಗರ್ತಿ 7,  ಧರ್ಮಸ್ಥಳ, ಕೊಲ್ಲೂರು, ಹೊನ್ನಾವರ, ಶಿರಸಿ, ಖಾನಾಪುರ, ಭದ್ರಾವತಿ, ಬಾಳೆಹೊನ್ನೂರು 6, ಮಾಣಿ, ಸಿದ್ದಾಪುರ, ಬನವಾಸಿ, ಜೋಯಿಡಾ, ಮಡಿಕೇರಿ, ತೀರ್ಥಹಳ್ಳಿ,ಎನ್.ಆರ್.ಪುರ 5, ಬಂಟ್ವಾಳ, ಕಾರ್ಕಳ, ಮಂಚಿಕೇರಿ, ಕ್ಯಾಸಲ್ ರಾಕ್, ಬೆಳಗಾವಿ, ಹಾರಂಗಿ, ಶಿಕಾರಿಪುರ, ಶಿರಾಳಕೊಪ್ಪ, ಹಾಸನ, ಎಚ್.ಡಿ.ಕೋಟೆ, ಸರಗೂರು, ಬಂಡೀಪುರ 4, ಮೂಡುಬಿದಿರೆ, ಪುತ್ತೂರು, ಸುಬ್ರಹ್ಮಣ್ಯ, ಮಂಗಳೂರು ವಿಮಾನ ನಿಲ್ದಾಣ, ಕಾರವಾರ, ಮಂಕಿ, ಹಾನಗಲ್, ಹಿರೇಕೆರೂರು, ಆನವಟ್ಟಿ, ಸೊರಬ, ಆವತಿ, ಅಜ್ಜಂಪುರ, ಶಿವಾನಿ, ಅರಕಲಗೂಡು, ಕೊಣನೂರು, ಬೇಲೂರು, ಚನ್ನಗಿರಿ 3, ಪಣಂಬೂರು, ಸುಳ್ಯ, ಕುಮಟಾ, ಅಂಕೋಲ, ಹಳಿಯಾಳ, ಉಡುಪಿ, ಶಿರಾಲಿ, ಬೆಳಗಾವಿ ವಿಮಾನ ನಿಲ್ದಾಣ, ಸಂಕೇಶ್ವರ, ಶಿಗ್ಗಾವಿ, ರಟ್ಟಿಹಳ್ಳಿ, ಕುಶಾಲನಗರ, ಅರಸಲು, ಹೊಳಲೂರು, ಲಿಂಗದಹಳ್ಳಿ, ಭಾವಿಕೆರೆ, ತರೀಕೆರೆ, ದುದ್ದ, ಹೊಳೆನರಸೀಪುರ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ದಾವಣಗೆರೆ, ಹೊನ್ನಾಳಿ, ಹೊಳೆಲ್ಕೆರೆ, ಭರಮಸಾಗರದಲ್ಲಿ ತಲಾ 2 ಸೆಂ.ಮೀ  ಮಳೆಯಾಗಿದೆ.ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಹಲವೆಡೆ, ದಕ್ಷಿಣ ಒಳನಾಡಿನ ಘಟ್ಟ ಪ್ರದೇಶದ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Post Comments (+)