ಕರಾವಳಿ ವಿಚಕ್ಷಣ ಜಾಲ ಬಲಪಡಿಸಲು 38 ಹೆಚ್ಚುವರಿ ರೇಡಾರ್ ಅಳವಡಿಕೆ

7

ಕರಾವಳಿ ವಿಚಕ್ಷಣ ಜಾಲ ಬಲಪಡಿಸಲು 38 ಹೆಚ್ಚುವರಿ ರೇಡಾರ್ ಅಳವಡಿಕೆ

Published:
Updated:

ನವದೆಹಲಿ (ಪಿಟಿಐ): ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ 26/11ರ ತರಹದ ದಾಳಿಯನ್ನು ಭವಿಷ್ಯದಲ್ಲಿ ತಡೆಗಟ್ಟುವುದಕ್ಕಾಗಿ 1 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 38 ಹೆಚ್ಚುವರಿ ರೇಡಾರ್‌ಗಳನ್ನು ಅಳವಡಿಸಿ ಕರಾವಳಿ ವಿಚಕ್ಷಣಾ ಜಾಲವನ್ನು (ಸಿಎಸ್‌ಎನ್) ಬಲಪಡಿಸಲು ರಕ್ಷಣಾ ಸಚಿವಾಲಯ ಉದ್ದೇಶಿಸಿದೆ.ಅನುಮಾನಾಸ್ಪದ ಹಡಗುಗಳ ಚಲನವಲನಗಳ ಮೇಲೆ ನಿಗಾ ವಹಿಸುವ ದೃಷ್ಟಿಯಿಂದ ರಕ್ಷಿಣಾ ಸಚಿವಾಲಯವು ರೇಡಾರ್‌ಗಳನ್ನು ಅಳವಡಿಸಲು ನಿರ್ಧರಿಸಿದೆ.ಸಿಎಸ್‌ಎನ್ ಎರಡನೇ ಹಂತದ ಅನ್ವಯ ಕರಾವಳಿ ಪ್ರದೇಶದಲ್ಲಿ 38 ಹೆಚ್ಚುವರಿ ರೇಡಾರ್‌ಗಳನ್ನು ಅಳವಡಿಸಲು 1 ಸಾವಿರ ಕೋಟಿ ರೂಪಾಯಿಯ ಪ್ರಸ್ತಾವದ ಅಡಿ ಕಾರ್ಯ ನಿರ್ವಹಿಸುತ್ತಿರುವುದಾಗಿ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಈ ಕುರಿತ ಪ್ರಸ್ತಾವ ಕೆಲವೇ ದಿನಗಳಲ್ಲಿ ಸಿದ್ಧವಾಗಲಿದೆ. ನಂತರ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ ಒಪ್ಪಿಗೆಗೆ ಕಳುಹಿಸಲಾಗುವುದೆಂದು ಮೂಲಗಳು ತಿಳಿಸಿವೆ.ಎನ್‌ಸಿಡಬ್ಲ್ಯುಗೆ ನೇಮಕ

ನವದೆಹಲಿ(ಪಿಟಿಐ): ಹಿರಿಯ ಐಎಎಸ್ ಅಧಿಕಾರಿ ಅಜಿತ್ ಎಂ.ಶರಣ್ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry