ಕರಿಬಸವೇಶ್ವರ ಗದ್ದುಗೆ ರಥೋತ್ಸವ

7

ಕರಿಬಸವೇಶ್ವರ ಗದ್ದುಗೆ ರಥೋತ್ಸವ

Published:
Updated:

ಚಿತ್ರದುರ್ಗ: ನಗರದ ಜೋಗಿಮಟ್ಟಿ ರಸ್ತೆಯಲ್ಲಿ ಬುಧವಾರ ಕರಿಬಸವೇಶ್ವರ ಗದ್ದುಗೆ ರಥೋತ್ಸವ ಸಂಭ್ರಮದಿಂದ ನಡೆಯಿತು.ಬುಧವಾರ ಬೆಳಿಗ್ಗೆ ಗಂಗಾಪೂಜೆ,  ಅಭಿಷೇಕ, ಹೋಮ ಹವನ ಕಾರ್ಯಕ್ರಮಗಳು ನಡೆದವು. ನಂತರ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಕರಿಬಸವೇಶ್ವರ ಸ್ವಾಮಿ ಮತ್ತು ಗಾಯತ್ರಿ ದೇವಿಯ ಪಲ್ಲಕ್ಕಿ ಉತ್ಸವ ನಡೆಯಿತು. ಬಳಿಕ ಸಕಲ ವೈಭವಗಳೊಂದಿಗೆ ರಥೋತ್ಸವ ನಡೆಯಿತು.ರಥೋತ್ಸವದಲ್ಲಿ ಡೊಳ್ಳು ಕುಣಿತ ಹಾಗೂ ವಿವಿಧ ಜನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ನಗರಸಭೆ ಸದಸ್ಯ ಮಹೇಶ್ ಹಾಗೂ ಮದಕರಿ ಯುವಕ ಸಂಘದ ಗಿರೀಶ್, ಮಹೇಶ್, ರಮೇಶ್, ಬಾಬು ಮತ್ತಿತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry